HomeLive Newsರಾಜ್ಯದ ಹಣಕಾಸಿನ ವ್ಯವಸ್ಥೆ ದುಸ್ಥಿತಿಗೆ ತಳ್ಳಿ ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳ ಜಾರಿ ಸರಿಯಲ್ಲ: ಸಂಸದ...

ರಾಜ್ಯದ ಹಣಕಾಸಿನ ವ್ಯವಸ್ಥೆ ದುಸ್ಥಿತಿಗೆ ತಳ್ಳಿ ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳ ಜಾರಿ ಸರಿಯಲ್ಲ: ಸಂಸದ ಬೊಮ್ಮಾಯಿ ಕಿಡಿ

ಚಿಕ್ಕಬಳ್ಳಾಪುರ: ಗ್ಯಾರೆಂಟಿ ಯೋಜನೆಗಳ ಬಗ್ಗೆ ಯಾರಿಗೂ ವಿರೋಧವಿಲ್ಲ ರಾಜ್ಯದ ಹಣಕಾಸಿನ ವ್ಯವಸ್ಥೆ ದುಸ್ಥಿತಿಗೆ ತೆಗೆದುಕೊಂಡು ಹೋಗಿ ರಾಜಕೀಯ ಲಾಭಕ್ಕಾಗಿ ಜಾರಿ ಮಾಡಿರುವುದು ಸರಿಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಗ್ಯಾರೆಂಟಿ ಯೋಜನೆಗಳನ್ನು ಕೇವಲ ರಾಜಕೀಯ ಲಾಭಕ್ಕಾಗಿ ಮಾಡಿರುವುದು ಎಷ್ಟು ಸರಿ. ಯಾವುದನ್ನೂ ಪೂರ್ವಭಾವಿಯಾಗಿ ಚಿಂತನೆ ಮಾಡದೇ ಜಾರಿ ಮಾಡಿರುವುದರಿಂದ ರಾಜ್ಯ ಅನುಭವಿಸುತ್ತಿದೆ ಎಂದರು.

ಶಾಲೆಗಳಲ್ಲಿ ಬೆಂಚ್ ಇಲ್ಲಾ, ಆಸ್ಪತ್ರೆಗಳಲ್ಲಿ ಔಷಧ ಇಲ್ಲ. ಮೆಡಿಕಲ್ ಕಾಲೇಜುಗಳಲ್ಲಿ ಮೂಲ ಸೌಕರ್ಯ ಇಲ್ಲ. ಶೀಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನಲ್ಲಿ ಮೂರು ವರ್ಷವಾದರೂ ಸರಿಯಾದ ಸೌಕರ್ಯ ಇಲ್ಲ. ಮೂರು ವರ್ಷದಲ್ಲಿ ಸೌಲಭ್ಯ ಒದಗಿಸಬೇಕಿತ್ತು. ಯಾರಿದ್ದಾಗ ಏನು ಕೆಲಸ ಆಗಿತ್ತು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular