BIG NEWS: ಒಬಿಸಿ ಅಧ್ಯಕ್ಷರನ್ನಾಗಿ ನೇಮಕ: ಇದು ಸಿದ್ದರಾಮಯ್ಯನವರಿಗೆ ಡಿಮೋಷನ್ನಾ? ಪ್ರಮೋಷನ್ನಾ? ಸಂಸದ ಬೊಮ್ಮಾಯಿ ಪ್ರಶ್ನೆ

ಬೆಂಗಳೂರು: ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎಐಸಿಸಿ ನೇಮಕ ಮಾಡಿರುವುದಕ್ಕೆ ಸಂಸದ ಬಸವರಾಜ್ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬೊಮ್ಮಾತಿ, ಒಬಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಸಿದ್ದರಾಮಯ್ಯನವರಿಗೆ ಇದಿ ಡಿಮೋಷನ್ನಾ? ಪ್ರಮೋಷನ್ನಾ? ಇದಕ್ಕೆ ಸಿದ್ದರಾಮಯ್ಯನವರೇ ಉತ್ತರ ಕೊಡಬೇಕು ಎಂದಿದ್ದಾರೆ.

ಅಧಿಕಾರ ಇಲ್ಲದ ಸಮಿತಿಗೆ ಮುಖ್ಯಮಂತ್ರಿಯಿದ್ದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕರ್ನಾತಕ ರಾಜಕಾರಣದಲ್ಲಿ ಬದಲಾವಣೆಯ ಪ್ರಶ್ನೆಗಳಿಗೆ ಇದು ಪುಷ್ಠಿ ನೀಡುತ್ತಿದೆ. ಸಿಎಂ ಆಗಿದ್ದವರಿಗೆ ರಾಷ್ಟ್ರಮಟ್ಟದಲ್ಲಿ ಹುದ್ದೆ ಕೊಟ್ಟಿದ್ದಾರೆ. ಇದರ ಹಿಂದೆ ಬದಲಾವಣೆಯ ಸೂಚನೆಯಿದೆ ಎಂಬುದು ಸಾಬೀತಾಗುತ್ತದೆ. ಈ ಹಿಂದೆ ಹಲವು ಬಾರಿ ಇಂತಹ ಸನ್ನಿವೇಶಗಳು ನಡೆದಿವೆ. ಇದು ಸಿದ್ದರಾಮಯ್ಯ ಅವರಿಗೆ ಡಿಮೋಷನ್ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read