ನವದೆಹಲಿ: ಅಯೋಧ್ಯೆಯಲ್ಲಿ ಭಗವಾನ್ ರಾಮನ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಸಂದರ್ಭದಲ್ಲಿ ಜನವರಿ 22 ರಂದು ಎಲ್ಲಾ ನ್ಯಾಯಾಲಯಗಳಿಗೆ ನ್ಯಾಯಾಂಗ ರಜೆ ನೀಡುವಂತೆ ಭಾರತೀಯ ಬಾರ್ ಕೌನ್ಸಿಲ್ ಅಧ್ಯಕ್ಷರು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ರಜೆ ನೀಡಲು ಮನವಿ ಮಾಡಿದ್ದಾರೆ.
ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭ ಕಾರಣಕ್ಕಾಗಿ ಜನವರಿ 22 ರಂದು ಸುಪ್ರೀಂ ಕೋರ್ಟ್‌ಗೆ ರಜೆ ಘೋಷಿಸಲು ಔಪಚಾರಿಕ ಮನವಿ ಮಾಡಿದ್ದಾರೆ.
ವಕೀಲ ಮಿಶ್ರಾ ಅವರು ತಮ್ಮ ಅರ್ಜಿಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ರಾಷ್ಟ್ರದ ಪ್ರತಿಯೊಬ್ಬ ನಾಗರಿಕನ ರಾಷ್ಟ್ರೀಯ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಗೌರವದ ವಿಷಯ ಎಂದು ಉಲ್ಲೇಖಿಸಿದ್ದಾರೆ.
ನವೆಂಬರ್ 9, 2019 ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು, ಜನವರಿ 22 ರ ಈ ಐತಿಹಾಸಿಕ ಘಟನೆ ನಡೆಯಲು ಕಾರಣವಾಗಿದೆ. ಹೀಗಾಗಿ ಎಲ್ಲಾ ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲರಿಗೆ ಅವಕಾಶ ನೀಡಲು ಎಲ್ಲಾ ನ್ಯಾಯಾಲಯಗಳಿಗೆ ಪ್ರಾಣ ಪ್ರತಿಷ್ಠೆಯ ದಿನದಂದು ಅಧಿಕೃತ ರಜೆ ನೀಡಬೇಕೆಂದು ಕೋರಿದ್ದಾರೆ.
#BREAKING Bar Council of India Chairman writes to CJI DY Chandrachud requesting for a judicial holiday across all courts on January 22 on the occasion of #Pranpratishtha ceremony of #LordRam in #Ayodhya pic.twitter.com/zqZMaxraFN
— Bar and Bench (@barandbench) January 17, 2024