ಬೆಂಗಳೂರು : ಬನ್ನೇರುಘಟ್ಟ ಝೂ ಪ್ರವೇಶ ಶುಲ್ಕ ಏರಿಕೆಯಾಗಿದ್ದು, ಆಗಸ್ಟ್ 1 ರಿಂದ ಪರಿಷ್ಕ್ರತ ದರ ಜಾರಿಗೆ ಬರಲಿದೆ.
ಈ ಪರಿಷ್ಕೃತ ದರವು ಆಗಸ್ಟ್ 1ರಿಂದ ಅನ್ವ ಯವಾಗುವಂತೆ ಚಾಲನೆಗೆ ಬರಲಿದೆ. ವಯಸ್ಕರಿಗೆ 100 ರಿಂದ 120 ರೂ ಗೆ ಏರಿಸಲಾಗಿದೆ. ಮಕ್ಕಳಿಗೆ 50 ರು.ನಿಂದ 60 ರೂಗೆ ಹೆಚ್ಚಳ ಮಾಡಲಾಗಿದೆ ಹಾಗೂ ಹಿರಿಯ ನಾಗರಿಕರಿಗೆ 60ರಿಂದ 70 ರೂಗೆ ಹೆಚ್ಚಳ ಮಾಡಲಾಗಿದೆ. ಮೃಗಾಲಯ, ಚಿಟ್ಟೆ ಉದ್ಯಾನವನ ಕಾಂಬೋ ಪರಿಷ್ಕೃತ ದರ ವಯಸ್ಕರಿಗೆ 70 ರು.ಮಕ್ಕಳಿಗೆ 90ರು. ಹಿರಿಯ ನಾಗರಿಕರಿಗೆ 100 ರು. ನಿಗದಿ ಮಾಡಿದೆ. ಚಿಟ್ಟೆ ಉದ್ಯಾನ ವನ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.
You Might Also Like
TAGGED:ಬನ್ನೇರುಘಟ್ಟ