HomeBusinessಗ್ರಾಹಕರೇ ಗಮನಿಸಿ : ದೇಶಾದ್ಯಂತ ನಾಳೆಯಿಂದ 4 ದಿನ ಬ್ಯಾಂಕ್ ಬಂದ್, ಇಂದೇ ಕೆಲಸ ಮುಗಿಸಿಕೊಳ್ಳಿ.!

ಗ್ರಾಹಕರೇ ಗಮನಿಸಿ : ದೇಶಾದ್ಯಂತ ನಾಳೆಯಿಂದ 4 ದಿನ ಬ್ಯಾಂಕ್ ಬಂದ್, ಇಂದೇ ಕೆಲಸ ಮುಗಿಸಿಕೊಳ್ಳಿ.!

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಬ್ಯಾಂಕ್‌ ನೌಕರರ ದೇಶವ್ಯಾಪಿ ಮುಷ್ಕರ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 11ರಿಂದ 14ರವರೆಗೆ ಸತತ ನಾಲ್ಕು ದಿನ ಬ್ಯಾಂಕ್‌ ಸೇವೆಗಳಿಗೆ ವ್ಯತ್ಯಯ ಉಂಟಾಗಲಿದೆ. ನಗದು ವಹಿವಾಟು, ಚೆಕ್‌ ಕ್ಲಿಯರೆನ್ಸ್‌ ಸೇರಿದಂತೆ ಅಗತ್ಯ ಬ್ಯಾಂಕಿಂಗ್‌ ಕೆಲಸಗಳಿದ್ದರೆ ಗ್ರಾಹಕರು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವುದು ಒಳಿತು.

ದೇಶಾದ್ಯಂತ ಬ್ಯಾಂಕ್‌ ಸೇವೆಗಳಲ್ಲಿ ಸತತ ನಾಲ್ಕು ದಿನಗಳ ಕಾಲ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಬ್ಯಾಂಕ್‌ ನೌಕರರ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್‌ 11ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಜಾರಿಗೆ ತರಬೇಕು, ಪಿಂಚಣಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್‌ ಯೂನಿಯನ್‌ಗಳು ಮುಷ್ಕರ ನಡೆಸಲು ನಿರ್ಧರಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಸೆಪ್ಟೆಂಬರ್‌ 11ರಂದು ಬ್ಯಾಂಕ್‌ ಸೇವೆಗಳಿಗೆ ಅಡಚಣೆ ಉಂಟಾಗಲಿದೆ. ಬಳಿಕ ಎರಡನೇ ಶನಿವಾರ, ಭಾನುವಾರ ಹಾಗೂ ಗಣೇಶ ಚತುರ್ಥಿ ಇರುವುದರಿಂದ ಸತತ ನಾಲ್ಕು ದಿನ ಬ್ಯಾಂಕ್‌ಗಳು ಮುಚ್ಚಿರಲಿವೆ.

ಸತತ ನಾಲ್ಕು ದಿನ ಬ್ಯಾಂಕ್‌ ಬಂದ್

ಸೆಪ್ಟೆಂಬರ್‌ 11ರಂದು ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್‌ ಸೇವೆಗಳು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್‌ 12ರಂದು ಎರಡನೇ ಶನಿವಾರವಾದ ಕಾರಣ ಬ್ಯಾಂಕ್‌ಗಳಿಗೆ ಸಾಮಾನ್ಯ ರಜೆ ಇರಲಿದೆ. ಸೆಪ್ಟೆಂಬರ್‌ 13ರಂದು ಭಾನುವಾರವಾಗಿರುವುದರಿಂದ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಇನ್ನು ಸೆಪ್ಟೆಂಬರ್‌ 14ರಂದು ಗಣೇಶ ಚತುರ್ಥಿ ಹಬ್ಬದ ರಜೆ ಇರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್‌ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.

ಹೀಗಾಗಿ ಸೆಪ್ಟೆಂಬರ್‌ 11ರಿಂದ 14ರವರೆಗೆ ಸತತ ನಾಲ್ಕು ದಿನ ಬ್ಯಾಂಕ್‌ ಸೇವೆಗಳಿಗೆ ವ್ಯತ್ಯಯ ಉಂಟಾಗಲಿದೆ. ಈ ಅವಧಿಯಲ್ಲಿ ನಗದು ಠೇವಣಿ, ಹಣ ವಿತ್‌ಡ್ರಾ, ಚೆಕ್‌ ಕ್ಲಿಯರೆನ್ಸ್‌ ಸೇರಿದಂತೆ ಹಲವು ಬ್ಯಾಂಕಿಂಗ್‌ ಸೇವೆಗಳು ಪರಿಣಾಮಕ್ಕೆ ಒಳಗಾಗಬಹುದು. ಇದರಿಂದ ಸಾಮಾನ್ಯ ಗ್ರಾಹಕರ ಜೊತೆಗೆ ವ್ಯಾಪಾರ ಮತ್ತು ವಾಣಿಜ್ಯ ವಲಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸೆಪ್ಟೆಂಬರ್‌ 28ರಿಂದ ಮತ್ತೆ ಮೂರು ದಿನಗಳ ಕಾಲ ಮುಷ್ಕರ ನಡೆಸುವುದಾಗಿ, ಬಳಿಕ ಅಕ್ಟೋಬರ್‌ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬ್ಯಾಂಕ್‌ ನೌಕರರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಚರ್ಚೆ ವಿಫಲ

ಕೇಂದ್ರ ಸರ್ಕಾರ ಮತ್ತು ಬ್ಯಾಂಕ್‌ ಯೂನಿಯನ್‌ಗಳ ನಡುವೆ ಮಾತುಕತೆ ನಡೆದಿದ್ದರೂ ಯಾವುದೇ ಒಮ್ಮತ ಮೂಡಿಲ್ಲ. ಐದು ದಿನಗಳ ಕೆಲಸದ ಪದ್ಧತಿ ಜಾರಿಗೆ ತರುವ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವವರೆಗೆ ಮುಷ್ಕರವನ್ನು ಮುಂದೂಡುವುದಿಲ್ಲ ಎಂದು ಬ್ಯಾಂಕ್‌ ಯೂನಿಯನ್‌ಗಳು ಸ್ಪಷ್ಟಪಡಿಸಿವೆ.

ಮುಖ್ಯ ಕಾರ್ಮಿಕ ಆಯುಕ್ತರ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಣಕಾಸು ಸೇವೆಗಳ ಇಲಾಖೆ ಹಾಗೂ ಕಾರ್ಮಿಕ ಅಧಿಕಾರಿಗಳ ಪ್ರತಿನಿಧಿಗಳೊಂದಿಗೆ ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್ಸ್‌ (UFBU) ಚರ್ಚೆ ನಡೆಸಿತು. ಅಧಿಕಾರಿಗಳು ಮುಷ್ಕರವನ್ನು ಮುಂದೂಡುವಂತೆ ಮನವಿ ಮಾಡಿದರು. ಆದರೆ ಬ್ಯಾಂಕ್‌ ಸಂಘಟನೆಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದು, ಈಗಾಗಲೇ ಘೋಷಿಸಿರುವ ಮುಷ್ಕರ ಯಥಾವತ್ತಾಗಿ ಮುಂದುವರಿಯಲಿದೆ ಎಂದು ತಿಳಿಸಿವೆ.

ಬ್ಯಾಂಕ್ ನೌಕರರ ಬೇಡಿಕೆಗಳೇನು..?

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ (UFBU) ಬಹುಕಾಲದಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವಂತೆ, ಉಳಿದ ಶನಿವಾರಗಳನ್ನೂ ರಜೆ ಮಾಡುವಂತೆ ಒತ್ತಾಯಿಸುತ್ತಿದೆ. 2ನೇ ಮತ್ತು 4ನೇ ಶನಿವಾರ ಈಗಾಗಲೇ ರಜೆಯಾಗಿವೆ. ಬ್ಯಾಂಕ್ ನೌಕರರ ಕಾರ್ಯಕ್ಷಮತೆ ಆಧಾರಿತ Performance Linked Incentive (PLI) ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಯೂನಿಯನ್‌ಗಳು ವಿರೋಧಿಸುತ್ತಿವೆ.

ನೌಕರರಿಗೆ ನ್ಯಾಯಯುತ ಹಾಗೂ ಸಮಾನ ಪ್ರೋತ್ಸಾಹಧನ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ನಿವೃತ್ತಿ ನಂತರದ ಸೌಲಭ್ಯಗಳು, ವೈದ್ಯಕೀಯ ನೆರವು ಹಾಗೂ ಪಿಂಚಣಿ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಪಡಿಸುವಂತೆ ಯೂನಿಯನ್‌ಗಳು ಒತ್ತಾಯಿಸುತ್ತಿವೆ.

ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ಹೊಸ ನೇಮಕಾತಿ ಹೆಚ್ಚಿಸಬೇಕು ಮತ್ತು ಹೊರಗುತ್ತಿಗೆ/ತಾತ್ಕಾಲಿಕ ನೌಕರರ ಸೇವಾ ನಿಯಮಗಳನ್ನು ಸುಧಾರಿಸಬೇಕು ಎಂಬ ಬೇಡಿಕೆಯೂ ಇದೆ. ಈ ಬೇಡಿಕೆಗಳ ಹಿನ್ನೆಲೆಯಲ್ಲಿ UFBU ಸೆಪ್ಟೆಂಬರ್ 11, 2026ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಸೆಪ್ಟೆಂಬರ್ 28ರಿಂದ 30ರವರೆಗೆ ಮತ್ತೊಂದು ಮೂರು ದಿನಗಳ ಮುಷ್ಕರ ಹಾಗೂ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆಯೂ ವರದಿಯಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular