ನವದೆಹಲಿ: ಫೆಬ್ರವರಿ ತಿಂಗಳು ಮುಕ್ತಾಯದ ಹಂತದಲ್ಲಿದೆ. ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆ ಹಣಕಾಸು ವರ್ಷದ ಅಂತ್ಯದ ಜೊತೆಗೆ ಹಬ್ಬಗಳ ಸರಣಿಯೇ ಎದುರಾಗಲಿದೆ. ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಹೊಂದಿದ್ದರೆ, ಈ ರಜೆಗಳ ಪಟ್ಟಿಯನ್ನು ಒಮ್ಮೆ ಗಮನಿಸುವುದು ಉತ್ತಮ.
ಆರ್‌ಬಿಐ (RBI) ಬಿಡುಗಡೆ ಮಾಡಿರುವ ಕ್ಯಾಲೆಂಡರ್ ಪ್ರಕಾರ, ಶನಿವಾರ ಮತ್ತು ಭಾನುವಾರ ಸೇರಿದಂತೆ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 18 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲಿವೆ.
ಮಾರ್ಚ್ ತಿಂಗಳು ಆರ್ಥಿಕ ವರ್ಷದ (Financial Year) ಕೊನೆಯ ತಿಂಗಳಾಗಿರುವುದರಿಂದ ಬ್ಯಾಂಕ್‌ಗಳಲ್ಲಿ ಕೆಲಸದ ಒತ್ತಡ ಹೆಚ್ಚಿರುತ್ತದೆ. ಹಬ್ಬಗಳ ಕಾರಣದಿಂದ ಸತತ ರಜೆಗಳು ಬರುವುದರಿಂದ ಹಣಕಾಸಿನ ವ್ಯವಹಾರಗಳಲ್ಲಿ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಿ.ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಎಟಿಎಂ (ATM), ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ
ದಿನಾಂಕ ದಿನ ರಜೆಯ ವಿವರ ರಾಜ್ಯಗಳು
ಮಾರ್ಚ್ 1 ಭಾನುವಾರ ವಾರದ ರಜೆ ದೇಶಾದ್ಯಂತ
ಮಾರ್ಚ್ 2 ಸೋಮವಾರ ಹೋಳಿ ಉತ್ತರ ಪ್ರದೇಶ
ಮಾರ್ಚ್ 3 ಮಂಗಳವಾರ ಹೋಳಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಇತ್ಯಾದಿ
ಮಾರ್ಚ್ 4 ಬುಧವಾರ ಹೋಳಿ / ಧುಲೇತಿ ದೆಹಲಿ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್
ಮಾರ್ಚ್ 8ಭಾನುವಾರವಾರದ ರಜೆದೇಶಾದ್ಯಂತ
ಮಾರ್ಚ್ 13ಶುಕ್ರವಾರಚಾಪಚಾರ್ ಕುತ್ಮಿಝೋರಾಂ, ಜಮ್ಮು
ಮಾರ್ಚ್ 14ಶನಿವಾರಎರಡನೇ ಶನಿವಾರದೇಶಾದ್ಯಂತ
ಮಾರ್ಚ್ 15ಭಾನುವಾರವಾರದ ರಜೆದೇಶಾದ್ಯಂತ
ಮಾರ್ಚ್ 17ಮಂಗಳವಾರಶಬಿ ಖಾದರ್ಮಣಿಪುರ, ಜಮ್ಮು ಮತ್ತು ಕಾಶ್ಮೀರ
ಮಾರ್ಚ್ 19ಗುರುವಾರಯುಗಾದಿ / ಗುಧಿ ಪಡವಾಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ
ಮಾರ್ಚ್ 20ಶುಕ್ರವಾರಈದ್ ಉಲ್ ಫಿತರ್ (ರಂಜಾನ್)ಹೆಚ್ಚಿನ ಎಲ್ಲಾ ರಾಜ್ಯಗಳಲ್ಲಿ
ಮಾರ್ಚ್ 21ಶನಿವಾರರಂಜಾನ್ ಈದ್ಯುಪಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರ್ಯಾಣ
ಮಾರ್ಚ್ 22ಭಾನುವಾರವಾರದ ರಜೆದೇಶಾದ್ಯಂತ
ಮಾರ್ಚ್ 26ಗುರುವಾರಶ್ರೀರಾಮನವಮಿತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್
ಮಾರ್ಚ್ 27ಶುಕ್ರವಾರಶ್ರೀರಾಮನವಮಿ ಗುಜರಾತ್, ಪಶ್ಚಿಮ ಬಂಗಾಳ, ಉತ್ತರಾಖಂಡ್
ಮಾರ್ಚ್ 28ಶನಿವಾರನಾಲ್ಕನೇ ಶನಿವಾರದೇಶಾದ್ಯಂತ
ಮಾರ್ಚ್ 29ಭಾನುವಾರವಾರದ ರಜೆದೇಶಾದ್ಯಂತ
ಮಾರ್ಚ್ 31ಮಂಗಳವಾರಮಹಾವೀರ ಜಯಂತಿಅನೇಕ ರಾಜ್ಯಗಳಲ್ಲಿ (ಕರ್ನಾಟಕ ಸೇರಿ)
ಮಾರ್ಚ್ 2026: ಕರ್ನಾಟಕದ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿಮಾರ್ಚ್ ತಿಂಗಳಲ್ಲಿ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ
ಕರ್ನಾಟಕದ ಬ್ಯಾಂಕುಗಳಿಗೆ ಒಟ್ಟು 10 ದಿನಗಳ ಕಾಲ ರಜೆ ಇರಲಿದೆ. ವಿವರಗಳು ಹೀಗಿವೆ:
ದಿನಾಂಕದಿನರಜೆಯ ವಿವರ
ಮಾರ್ಚ್ 1ಭಾನುವಾರವಾರದ ರಜೆ
ಮಾರ್ಚ್ 8ಭಾನುವಾರವಾರದ ರಜೆ
ಮಾರ್ಚ್ 14ಶನಿವಾರ ಎರಡನೇ ಶನಿವಾರದ ರಜೆ
ಮಾರ್ಚ್ 15ಭಾನುವಾರವಾರದ ರಜೆ
ಮಾರ್ಚ್ 19ಗುರುವಾರ ಯುಗಾದಿ ಹಬ್ಬ
ಮಾರ್ಚ್ 20ಶುಕ್ರವಾರ ರಂಜಾನ್ ಹಬ್ಬ (ಈದ್-ಉಲ್-ಫಿತರ್)
ಮಾರ್ಚ್ 22ಭಾನುವಾರವಾರದ ರಜೆ
ಮಾರ್ಚ್ 28ಶನಿವಾರ ನಾಲ್ಕನೇ ಶನಿವಾರದ ರಜೆ
ಮಾರ್ಚ್ 29 ಭಾನುವಾರವಾರದ ರಜೆ
ಮಾರ್ಚ್ 31 ಮಂಗಳವಾರ ಮಹಾವೀರ ಜಯಂತಿ

