HomeSportsಭಾರತದಲ್ಲಿ ಟಿ-20 ವಿಶ್ವಕಪ್ ಆಡಲ್ಲ: ಹಠ ಬಿಡದ ಬಾಂಗ್ಲಾ, ಐಸಿಸಿ ಖಡಕ್ ಎಚ್ಚರಿಕೆ

ಭಾರತದಲ್ಲಿ ಟಿ-20 ವಿಶ್ವಕಪ್ ಆಡಲ್ಲ: ಹಠ ಬಿಡದ ಬಾಂಗ್ಲಾ, ಐಸಿಸಿ ಖಡಕ್ ಎಚ್ಚರಿಕೆ

ಭಾರತದಲ್ಲಿ ಟಿ-20 ಪುರುಷರ ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ ಎಂದು  ಬಾಂಗ್ಲಾದೇಶ ಮತ್ತೊಮ್ಮೆ ಹೇಳಿದೆ. ಅಲ್ಲದೇ ಸುರಕ್ಷತೆಯ ಕಾರಣಕ್ಕೆ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರ ಮಾಡುವಂತೆ ಹಳೆಯ ಬೇಡಿಕೆಯನ್ನು ಮತ್ತೆ ಮುಂದಿಟ್ಟಿದೆ.

ಭಾರತದಲ್ಲಿ ಟಿ-20 ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ ಎಂಬ ತನ್ನ ನಿಲುವನ್ನು ಬಾಂಗ್ಲಾದೇಶ ಬದಲಿಸಿಲ್ಲ, ಈ ಹಿಂದೆ ನೀಡಿದ್ದ ಹೇಳಿಕೆಯನ್ನೇ ಪುನರುಚ್ಚರಿಸಿದೆ. ಭದ್ರತೆ ಮತ್ತು ರಾಜಕೀಯ ಕಾರಣಕ್ಕೆ ಅದರ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕು ಎಂದು ಮತ್ತೊಮ್ಮೆ ಹೇಳಿದೆ.

ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಪ್ರಕಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಹಿರಿಯ ರಾಷ್ಟ್ರೀಯ ಕ್ರಿಕೆಟಿಗರು ಮತ್ತು ಸರ್ಕಾರದ ಕ್ರೀಡಾ ಸಲಹೆಗಾರರ ನಡುವೆ ಢಾಕಾದಲ್ಲಿ ನಡೆದ ಸಭೆಯ ನಂತರ ಈ ನಿಲುವನ್ನು ಪುನರುಚ್ಚರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಾರದ ಆರಂಭದಲ್ಲಿ ಐಸಿಸಿ ಬಾಂಗ್ಲಾದೇಶದ ಕೋರಿಕೆಯನ್ನು ತಿರಸ್ಕರಿಸಿದರೂ ಸಹ ತಂಡ ತನ್ನ ನಿಲುವು ಬದಲಿಸಿಲ್ಲ. “ನಾವು ಐಸಿಸಿ ಜೊತೆ ಮಾತುಕತೆ ಮುಂದುವರಿಸುತ್ತೇವೆ. ನಾವು ವಿಶ್ವಕಪ್ ಆಡಲು ಬಯಸುತ್ತೇವೆ, ಆದರೆ ನಾವು ಭಾರತದಲ್ಲಿ ಆಡುವುದಿಲ್ಲ. ನಾವು ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮಿನುಲ್ ಇಸ್ಲಾಂ ಬುಲ್ಬುಲ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಆಯೋಜಿಸಿ: ಬಿಸಿಬಿ ಮುಖ್ಯಸ್ಥರು ಶ್ರೀಲಂಕಾದಲ್ಲಿ ಆಡುವ ಐಸಿಸಿ ಪ್ರಸ್ತಾಪವನ್ನು ನಾವು ಪರಿಶೀಲಿಸುತ್ತೇವೆ. ಐಸಿಸಿ ಶ್ರೀಲಂಕಾವನ್ನು ಸಹ-ಆತಿಥೇಯರು ಎಂದು ಏಕೆ ಕರೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ವರದಿಯ ಪ್ರಕಾರ ಸರ್ಕಾರಿ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಐಸಿಸಿ ಶ್ರೀಲಂಕಾದಲ್ಲಿ ಆಡಲು ಅವಕಾಶ ನೀಡುತ್ತದೆ ಎಂದು ಬಾಂಗ್ಲಾದೇಶವು ಭರವಸೆ ಹೊಂದಿದೆ ಮತ್ತು ಬಾಂಗ್ಲಾದೇಶದ ಆಟಗಾರರು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಬುಧವಾರ ಐಸಿಸಿ ಮಂಡಳಿಯ ಸಭೆಯ ನಂತರ ಬಾಂಗ್ಲಾದೇಶದ ಭದ್ರತಾ ಕಾರಣಗಳನ್ನು ಅದು ತಳ್ಳಿ ಹಾಕಿದೆ ಮತ್ತು ಪಂದ್ಯಾವಳಿಯು ಭಾರತ ಮತ್ತು ಶ್ರೀಲಂಕಾದಲ್ಲಿ ನಿಗದಿಯಂತೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡುವುದಿಲ್ಲ ಎಂಬ ನಿಲುವು ಮುಂದುವರಿಸಿದರೆ ಟಿ-20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಬದಲು ಸ್ಕಾಟ್‌ಲ್ಯಾಂಡ್‌ ತಂಡವನ್ನು ಬದಲಾಯಿಸಬಹುದು ಎಂದು ಸಹ ಐಸಿಸಿ ಎಚ್ಚರಿಸಿದೆ.

ಭಾರತ ಮತ್ತು ಶ್ರೀಲಂಕಾ ಪುರುಷರ ಟಿ-20 ವಿಶ್ವಕಪ್ ಅನ್ನು ಆತಿಥ್ಯ ವಹಿಸಲು ಸಿದ್ಧವಾಗಿವೆ. ಫೆಬ್ರವರಿಯಲ್ಲಿ ಪ್ರಾರಂಭವಾಗಲಿರುವ ಪಂದ್ಯಗಳನ್ನು ಭಾರತವು ಬಹುಪಾಲು ಆಯೋಜಿಸುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular