BREAKING: ಹಾಡಹಗಲೇ ನಡುರಸ್ತೆಯಲ್ಲಿ ಪುಂಡರ ಗುಂಪಿನಿಂದ ಯುವತಿಯ ಮೈ-ಕೈ ಮುಟ್ಟಿ ಹಲ್ಲೆ; ರಕ್ಷಣೆಗೆ ಬಂದ ಸ್ಥಳೀಯರ ಮೇಲೂ ದಾಳಿ

ಆನೇಕಲ್: ಅಂಗಡಿಗೆ ಹೋಗುತ್ತಿದ್ದ ಯುವತಿಯ ಮೇಲೆ ಪುಂಡರ ಗುಂಪು ಹಾಡ ಹಗಲೇ ನಡು ರಸ್ತೆಯಲ್ಲಿ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನ ನ ರೇಣುಕಾಯಲ್ಲಮ್ಮ ಬಡಾವಣೆಯಲ್ಲಿ ನಡೆದಿದೆ.

ಯುವತಿ ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಅಂಗಡಿಗೆ ಹೋಗುತ್ತಿದ್ದಳು. ಈ ವೇಳೆ ಗಾಂಜಾ, ಎಣ್ಣೆ ಮತ್ತಲ್ಲಿದ್ದ 5-6 ಜನ ಪುಂಡರ ಗುಂಪು ಯುವತಿಯನ್ನು ತಡೆದು ಅಸಭ್ಯವಾಗಿ ವರ್ತಿಸಿದ್ದಾರೆ. ಮೈ-ಕೈ ಮುಟ್ಟಿ ಹಲ್ಲೆ ನಡೆಸಿದ್ದಾರೆ. ಯುವತಿ ಪುಂಡರಿಂದ ತಪ್ಪಿಸಿಕೊಂಡು ಕಿರುಚಾಡಿದ್ದಾಳೆ. ಆದರೂ ಬಿಡದೇ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ, ಅಲ್ಲದೇ ಕೆಟ್ಟ ಕೆಟ್ಟ ಪದಗಳಿಂದ ಮಾತನಾಡಿದ್ದಾರೆ. ಈ ವೇಳೆ ಸ್ಥಳೀಯರು ಸ್ಥಳಕ್ಕಾಗಮಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ಪುಂಡ ಯುವಕರ ಹುಚ್ಚಾಟ, ಯುವತಿಯ ಮೇಲೆ ಹಲ್ಲೆ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read