HomeKarnatakaBREAKING : ಬೆಂಗಳೂರಿನಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು 'ಉದ್ಯಮಿ' ಆತ್ಮಹತ್ಯೆ.!

BREAKING : ಬೆಂಗಳೂರಿನಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು ‘ಉದ್ಯಮಿ’ ಆತ್ಮಹತ್ಯೆ.!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಫೈನಾನ್ಸ್ ನವರ ಕಿರುಕುಳ ಮಿತಿ ಮೀರುತ್ತಿದೆ. ಸಾಲಗಾರರ ಕಿರುಕುಳಕ್ಕೆ ನೊಂದು ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

ಅರುಣ್ (38) ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿ. ಪೂಜಾ ಎಂಟ್ರಪ್ರೈಸೆಸ್ ದಿನೇಶ್ ಎಂಬುವವರ ಬಳಿ ಅರುಣ್ 6 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರಂತೆ. ಸಾಲ ನೀಡಲು ಅರುಣ್ ಅವರ ಕಾರನ್ನು ಶ್ಯೂರಿಟಿಯಾಗಿ ದಿನೇಶ್ ಪಡೆದಿದ್ದರಂತೆ. ವಾರದ ಹಿಂದಷ್ಟೇ 1.50 ಲಕ್ಷ ರೂ ಹಣವನ್ನು ಅರುಣ್ ವಾಪಾಸ್ ಕೊಟ್ಟಿದ್ದರಂತೆ. ಉಳಿದ ಸಾಲ ತೀರಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದ್ದರೂ ದಿನೇಶ್ ಕಿರುಕುಳ ನೀಡಿದ್ದಾಗಿ ಅರುಣ್ ತಂದೆ ಆರೋಪಿಸಿದ್ದಾರೆ.

ಉಳಿದ ಹಣ ಬೇಗ ನೀಡದಿದ್ದರೆ ಕೊಲೆ ಮಡುತ್ತೇನೆ. ಇಲ್ಲವೇ ಆತ್ಮಹತ್ಯೆ ಮಾಡಿಕೊ ಎಂದು ಬೆದರಿಕೆ ಹಾಕಿದ್ದರಂತೆ. ಇದೀಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅರುಣ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular