HomeLatest NewsBREAKING: ಬೆಂಗಳೂರಿನಲ್ಲಿ 5 ಕೋಟಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರು ಸೀಜ್ ಮಾಡಿದ RTO ಅಧಿಕಾರಿಗಳು

BREAKING: ಬೆಂಗಳೂರಿನಲ್ಲಿ 5 ಕೋಟಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರು ಸೀಜ್ ಮಾಡಿದ RTO ಅಧಿಕಾರಿಗಳು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 5 ಕೋಟಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರನ್ನು ಸೀಜ್ ಮಾಡಿರುವ ಘಟನೆ ನಡೆದಿದೆ.

ಕಾರು ನೊಂದಣಿ ವೇಳೆ ಕಡಿಮೆ ಮೌಲ್ಯವನ್ನು ತೀರಿಸಿದ್ದ ಕಾರಿನ ಮಾಲೀಕ ಈ ಮೂಲಕ ತೆರಿಗೆ ವಂಚನೆ ಮಾಡಿದ್ದರು. ಐದುವರೆ ಕೋಟಿ ಮೌಲ್ಯದ ಬೆಂಟ್ಲಿ ಕಾರನ್ನು ಎರಡುವರೆ ಕೋಟಿ ಮೌಲ್ಯದ ಕಾರು ಎಂದು ಸುಳ್ಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾರನ್ನು ಆರ್ ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಕೋರಮಮಂಗಲದಲ್ಲಿರುವ ಕಾರಿನ ಮಾಲೀಕನ ಮನೆಗೆ ದೌಡಾಯಿಸಿದ ಆರ್ ಟಿಒ ಅಧಿಕಾರಿಗಳು ಕಾರನ್ನು ಸೀಜ್ ಮಾಡಿದ್ದಾರೆ. ದಾಖಲೆ ಪರೀಶೀಲನೆ ವೇಳೆ ಕಾರಿನ ಮೌಲ್ಯ 5 ಕೋಟಿ 50 ಲಕ್ಷದ್ದು ಎಂಬುದು ಸ್ಪಷ್ಟವಾಗಿದೆ. ಆದರೆ ಕಾರಿನ ಮಾಲೀಕ ನೋಂದಣಿ ವೇಳೆ 2,43,50,000 ರೂ ಮೌಲ್ಯದ ಕಾರು ಎಂದು ಹೇಳಿದ್ದಾರೆ. ಇದರಿಂದ ಸುಮಾರು 70 ಲಕ್ಷದಷ್ಟು ತೆರಿಗೆ ವಂಚನೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಬೆಂಟ್ಲಿ ಕಾರಿನ ಮಾಲೀಕನ ಮನೆಗೆ ಬಂದ ಆರ್ ಟಿಒ ಅಧಿಕಾರಿಗಳು ಕಾರು ಸೀಜ್ ಮಾಡಿದ್ದಾರೆ. ಈ ವೇಳೆ ಮಾಲೀಕ ಕಾರು ಸೀಜ್ ಮಾಡಲು ಬಿಡಲ್ಲ. ಎರಡು ವರ್ಷಗಳ ಹಿಂದೆಯೇ ಕಾರು ನೋಂದಣಿಯಾಗಿದೆ. ನಾವೇನೂ ವಿಜಯ್ ಮಲ್ಯನಂತೆ ಫ್ರಾಡ್ ಮಾಡಿ ಓಡಿಹೋಗಲ್ಲ ಎಂದು ಅಧಿಅಕರಿಗಳ ಜೊತೆ ವಾಗ್ವಾದ ನಡೆಸಿದ ಪ್ರಸಂಗವೂ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular