HomeLatest Newsಪಾಕಿಸ್ತಾನವನ್ನೇ ನಡುಗಿಸಿದ ಬಲೂಚ್ ಮಹಿಳಾ ಹೋರಾಟಗಾರ್ತಿ, ಸಂಚಲನ ಸೃಷ್ಟಿಸಿದ ವೀಡಿಯೋ |WATCH VIDEO

ಪಾಕಿಸ್ತಾನವನ್ನೇ ನಡುಗಿಸಿದ ಬಲೂಚ್ ಮಹಿಳಾ ಹೋರಾಟಗಾರ್ತಿ, ಸಂಚಲನ ಸೃಷ್ಟಿಸಿದ ವೀಡಿಯೋ |WATCH VIDEO

ಬಲೂಚಿಸ್ತಾನದಲ್ಲಿ ಕಳೆದ 40 ಗಂಟೆಗಳಿಂದ ಪಾಕಿಸ್ತಾನಿ ಸೇನೆ ಮತ್ತು ಬಲೂಚ್ ಲಿಬರೇಷನ್ ಆರ್ಮಿ (BLA) ನಡುವೆ ಭೀಕರ ಕಾಳಗ ನಡೆಯುತ್ತಿದೆ. ಬಲೂಚಿಸ್ತಾನದ ಮುಖ್ಯಮಂತ್ರಿಗಳು 145 ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡರೆ, BLA ಸಂಘಟನೆಯು ಪಾಕ್ ಸೇನೆಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದ್ದೇವೆ ಎಂದು ಘೋಷಿಸಿದೆ.

ಬಲೂಚ್ ಹೋರಾಟಗಾರರು ಈ ಕಾರ್ಯಾಚರಣೆಯ ಮೂಲಕ ಕ್ವೆಟ್ಟಾ, ನೋಶ್ಕಿ ಮತ್ತು ಗ್ವಾದರ್ ಸೇರಿದಂತೆ ಹಲವು ನಗರಗಳಲ್ಲಿ ಪಾಕ್ ಸೇನಾ ನೆಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. 200ಕ್ಕೂ ಹೆಚ್ಚು ಪಾಕ್ ಸೈನಿಕರು ಮತ್ತು ಪೊಲೀಸರನ್ನು ಹತ್ಯೆ ಮಾಡಲಾಗಿದೆ ಮತ್ತು 17 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು BLA ವಕ್ತಾರ ಜಿಯಾಂದ್ ಬಲೂಚ್ ತಿಳಿಸಿದ್ದಾರೆ.ಈ ಬಾರಿಯ ಹೋರಾಟದಲ್ಲಿ ಮಹಿಳಾ ಫಿದಾಯಿಗಳ ಪಾತ್ರ ಪ್ರಮುಖವಾಗಿದೆ.

ಆಸಿಫಾ ಮೆಂಗಲ್ (24 ) ಎಂಬ ಮಹಿಳೆ ಜನವರಿ 31 ರಂದು ನೋಶ್ಕಿಯಲ್ಲಿರುವ ಪಾಕಿಸ್ತಾನದ ಗೂಢಚಾರಿ ಸಂಸ್ಥೆ ISI ಪ್ರಧಾನ ಕಚೇರಿಯ ಮೇಲೆ ಕಾರ್ ಬಾಂಬ್ ಸ್ಫೋಟಿಸಿ ಪ್ರಾಣತ್ಯಾಗ ಮಾಡಿದ್ದಾಳೆ. ಗ್ವಾದರ್ ರಂಗದಲ್ಲಿ ಪಾಕ್ ಸೇನೆಯ ವಿರುದ್ಧ ಹೋರಾಡಿ ಮರಣ ಹೊಂದಿದ್ದಾಳೆ. ಈಕೆ ತನ್ನ ಸಾವಿಗೆ 12 ಗಂಟೆಗಳ ಮೊದಲು ನೀಡಿದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಕ್ ಸಚಿವ ತಲಾಲ್ ಚೌಧರಿ ಅವರು ಬಂಡುಕೋರರು ಸಾಮಾನ್ಯ ಜನರ ವೇಷದಲ್ಲಿ ಬಂದು ಶಾಲೆ, ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಬಲೂಚಿಸ್ತಾನವು ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿದ್ದರೂ, ಅಲ್ಲಿನ ಜನರು ಬಡತನದಲ್ಲಿದ್ದಾರೆ. ಇಸ್ಲಾಮಾಬಾದ್ ಸರ್ಕಾರವು ತಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದೆ ಮತ್ತು ಚೀನಾದ CPEC ಯೋಜನೆಗಳಿಂದ ನಮಗೆ ಯಾವುದೇ ಪ್ರಯೋಜನವಿಲ್ಲ ಎಂಬುದು ಬಲೂಚ್ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಲೂಚಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಕುದಿಯುವ ಕೆಂಡದಂತಿದ್ದು, ದಶಕಗಳ ಕಾಲದ ದಮನಕ್ಕೆ ಪ್ರತಿಯಾಗಿ ದೊಡ್ಡ ಮಟ್ಟದ ದಂಗೆ ಎದ್ದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

https://twitter.com/i/status/2017986872895517059

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular