ಬಳ್ಳಾರಿ: ಬರೋಬ್ಬರಿ 5.20 ಇನ್ಶೂರೆನ್ಸ್ ಹಣಕ್ಕಾಗಿ ಆರು ಜನರ ಗ್ಯಾಂಗ್ ವ್ಯಕ್ತಿಯೋರ್ವನನ್ನು ಹತ್ಯೆಗೈದು, ಅಪಘಾತದಲ್ಲಿ ಸಾವು ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿ ನಡೆದಿದೆ.
ಕೌಲ್ ಪೇಟೆಯ ನಿವಾಸಿ ಗಂಗಾಧರ ಎಂದು ಗುರುತಿಸಲಾಗಿದೆ. ಗಂಗಾಧರ್ ಹೆಸರಲ್ಲಿ 5.20 ಇನ್ಶೂರೆನ್ಸ್ ಮಾಡಿಸಲಾಗಿತ್ತು. ಈ ಹಣ ಪಡೆಯಲು ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದರು. ಮೊದಲು ಕೊಲೆಗೈದು ಬಳಿಕ ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಮೃತದೇಹ ತಂಡು ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್ ನ್ನು ಬಾಡಿಗೆಗೆ ಪಡೆದು ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿದ್ದಾರೆ. ಅಪಘಾತದಲ್ಲಿ ಸಾವು ಎಂದು ಪರಾರುಯಾಗಿದ್ದಾರೆ.
ಈ ಬಗ್ಗೆ ಗಂಗಾಧರ್ ಪತ್ನಿ ದೂರು ನೀಡಿದ್ದರು. ಕೊಲೆ ಅನುಮಾನವಿದೆ ಎಂದು ದೂರು ದಾಖಲಿಸಿದ್ದರು. ಅಪಘಾತವಾಗಿದ್ದರೆ ಬೈಕ್ ನ ಕೀ ಗಾಡಿಯಲ್ಲಿರಬೇಕಿತ್ತು. ಆದರೆ ಕೀ ಸೈಡ್ ಬ್ಯಾಕ್ ಗಲ್ಲಿದೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ವಿಜಯನಗರದ ಅಜೇಯ, ರಿಯಾಜ್, ಯೋಗರಾಜ್ ಸಿಂಗ್, ನಕಲಿ ಪತ್ನಿ ಹುಲಿಗೆಮ್ಮ ಎಂದು ಗುರುತಿಸಲಾಗಿದೆ.