HomeLatest Newsಬಳ್ಳಾರಿ ಗಲಾಟೆ: ಬಲಿಯಾದ ಕಾರ್ಯಕರ್ತ ರಾಜಶೇಖರ್ ಗೆ 2 ಬಾರಿ ಪೋಸ್ಟ್ ಮಾರ್ಟಮ್ ಮಾಡಿದ್ದೇಕೆ? ಮೊದಲ...

ಬಳ್ಳಾರಿ ಗಲಾಟೆ: ಬಲಿಯಾದ ಕಾರ್ಯಕರ್ತ ರಾಜಶೇಖರ್ ಗೆ 2 ಬಾರಿ ಪೋಸ್ಟ್ ಮಾರ್ಟಮ್ ಮಾಡಿದ್ದೇಕೆ? ಮೊದಲ ಬಾರಿ ಶವ ಪರೀಕ್ಷೆಯಲ್ಲಿ ಗುಂಡು ಹೊರತೆಗೆಯದ್ದೇ ಮುಚ್ಚಿಟ್ಟಿದ್ದೇಕೆ?HDK ಹೊಸ ಬಾಂಬ್

ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ-ಫೈರಿಂಗ್ ನಡೆದು ಈ ವೇಳೆ ಗುಂಡೇತಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿರುವ ಘಟನೆ ನಡೆದಿದೆ. ಇದೀಗ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ಕಾರಣವೇನು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾರ್ಯಕರ್ತರ ಶವ ಪರೀಕ್ಷೆಯನ್ನು ಎರಡು ಬಾರಿ ಮಾಡಲಾಗಿದೆ. ಎರಡು ಬಾರಿ ಮಾಡಲು ಕಾರಣವೇನು? ನಮಗೆ ಬಂದ ಮಾಹಿತಿ ಪ್ರಕಾರ ಮೊದಲ ಬಾರಿ ಪೋಸ್ಟ್ ಮಾರ್ಟಮ್ ಮಾಡಿದಾಗ ದೇಹದಲ್ಲಿದ್ದ ಹೊಕ್ಕಿದ್ದ ಗುಂಡನ್ನು ಹೊರತೆಗೆಯದೇ ಹಾಗೆ ಮುಚ್ಚಿಟ್ಟಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಎರಡನೇ ಬಾರಿ ಶವಪರೀಕ್ಷೆ ಮಾಡಿ ಹೊರತೆಗೆದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಎರಡು ಬಾರಿ ಶವ ಪರೀಕ್ಷೆ ಯಾಕೆ ಮಾಡಿದ್ದು? ಮೊದಲ ಬಾರಿ ಏನು ವರದಿ ಬಂತು? ಎರಡನೇ ಬಾರಿ ಮಾಡುವಂತೆ ಹೇಳಿದ್ದು ಯಾರು? ಯಾರನ್ನು ಮೆಚ್ಚಿಸಲು ಇಂತಹ ಆದೇಶ ಎಂಬುದನ್ನು ಸರ್ಕಾರ ಹೇಳಲಿ. ಮೊದಲ ಶವ ಪರೀಕ್ಷೆಯಲ್ಲಿ ಗುಂಡು ಹೊರತೆಗೆಯಲಾಗಿಲ್ಲ ಎನ್ನಲಾಗಿದೆ. ಇದಕ್ಕೇನು ಕಾರಣ? ಗುಂಡು ಯಾವಾಗ ಹೊರಬಂತು? ಸಮಗ್ರವಾಗಿ ತನಿಖೆ ನಡೆಸುತ್ತೀರಾ? ಅಥವಾ ನ್ಯಾಯವನ್ನೇ ಮರೆ ಮಾಚುತ್ತೀರಾ? ರಾಜ್ಯದ ಜನರಿಗೆ ರಕ್ಷಣೆ ಕೊಡುವ ಜವಾಬ್ದಾರಿ ಸರ್ಕಾರಕ್ಕೆ ಇಲ್ಲವೇ? ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯನ್ನು ಪ್ರತಿಷ್ಠೆಯ ವಿಚಾರವನ್ನಾಗಿ ಮಾಡಿಕೊಂಡ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿದೆ. ಶಾಸಕ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ದಿಯನ್ನು ಬಂಧಿಸಿದ್ದೀರಾ ಅಥವಾ ರಾಜಾತಿಥ್ಯ ನೀಡಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೀರಾ? ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular