ಚಿತ್ರರಂಗಕ್ಕೆ ಕಾಲಿಟ್ಟ ಆರಂಭ ದಿನಗಳಲ್ಲಿ ತಾವೆದುರಿಸಿದ ಸಮಸ್ಯೆಗಳ ಕುರಿತು ಮನಬಿಚ್ಚಿ ಮಾತನಾಡಿದ ನಟಿ…!

ತೆಲುಗು ನಟಿ ಕಾವ್ಯಾ ಕಲ್ಯಾಣ್ ರಾಮ್ ಚಿತ್ರರಂಗಕ್ಕೆ ಬಂದಾಗ ಬಾಡಿ ಶೇಮಿಂಗ್ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಇತ್ತೀಚಿನ ಚಿತ್ರ ʼಬಳಗಂʼ ಯಶಸ್ಸಿನ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ವೇಳೆ ತಾವು ಎದುರಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ತೆಲುಗು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಆಡಿಷನ್‌ಗೆ ಹೋದಾಗ ನಿರ್ದೇಶಕರೊಬ್ಬರು, ನೀನು ದಪ್ಪ ಇದ್ದೀಯ, ನಾಯಕಿಯರು ಸ್ಲಿಮ್ ಮತ್ತು ಸುಂದರವಾಗಿರಬೇಕು ಎಂದು ಹೇಳುತ್ತಿದ್ದರು ಎಂದಿದ್ದಾರೆ. ನಟಿಯ ಈ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.

ದೇಹದ ತೂಕದ ಬಗ್ಗೆ ಹಿಂಜರಿಕೆಯಿದ್ದರೂ ಭರವಸೆಯನ್ನು ಬಿಡದೆ ಆಡಿಷನ್‌ಗೆ ಹೋಗುವುದನ್ನು ಮುಂದುವರೆಸಿದೆ ಎಂದು ಕಾವ್ಯಾ ಹೇಳಿದ್ದಾರೆ. ಬಳಗಂ ಚಿತ್ರದ ಯಶಸ್ಸಿನ ನಂತರ ನಟಿ ಕಾವ್ಯಾಗೆ ಹೆಚ್ಚಿನ ಆಫರ್‌ಗಳು ಬರುತ್ತಿವೆ ಎಂದು ವರದಿಯಾಗಿದೆ.

ಸಿನಿಮಾರಂಗದಲ್ಲಿ ನಟಿಯರು ಬಾಡಿ ಶೇಮಿಂಗ್ ಗೆ ಒಳಗಾಗಿರೋದು ಹೊಸದೇನಲ್ಲ. ಆಗಾಗ್ಗೆ ಈ ಬಗ್ಗೆ ನಟಿಯರು ಬಹಿರಂಗವಾಗಿ ಮಾತನಾಡುತ್ತಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read