HomeEntertainment'ಭೈರಾದೇವಿ' ಚಿತ್ರದ ಟ್ರೈಲರ್ ರಿಲೀಸ್

‘ಭೈರಾದೇವಿ’ ಚಿತ್ರದ ಟ್ರೈಲರ್ ರಿಲೀಸ್

ರಾಧಿಕಾ ಕುಮಾರಸ್ವಾಮಿ ಅಭಿನಯದ ಶ್ರೀ ಜೈ ನಿರ್ದೇಶನದ ‘ಭೈರಾದೇವಿ’ ಚಿತ್ರದ ಟ್ರೈಲರ್ ನಿನ್ನೆ ಜಾಂಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ನಿನ್ನೆ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಗಿದ್ದು ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್ ಹಾಗೂ ಅನುಪ್ರಭಾಕರ್ ಅವರಿಗೆ ಹೂವಿನಿಂದ ಅಭಿಷೇಕ ಮಾಡಲಾಗಿದೆ.

ಈ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡಿದ್ದು,ಕೆ ಕೆ ಸೆಂಥಿಲ್ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸೇರಿದಂತೆ ರಮೇಶ್ ಅರವಿಂದ್, ರವಿಶಂಕರ್, ರಂಗಾಯಣ ರಘು ಅನು ಪ್ರಭಾಕರ್, ಸ್ಕಂದ ಅಶೋಕ್, ಶಿವರಾಮ್, ಸುಚೇಂದ್ರ ಪ್ರಸಾದ್, ಮಾಳವಿಕಾ ಅವಿನಾಶ್, ಪದ್ಮಜಾ ರಾವ್ ತಾರಾಂಗಣದಲ್ಲಿದ್ದಾರೆ. ಸಿ ರವಿಚಂದ್ರನ್ ಸಂಕಲನ,  ಜೆ ಎಸ್ ವಾಲಿ ಛಾಯಾಗ್ರಹಣ,  ಡಾ. ಕೆ ರವಿವರ್ಮ ಸಾಹಸ ನಿರ್ದೇಶನ, ಹಾಗೂ ಮೋಹನ್ ನೃತ್ಯ  ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular