HomeKarnatakaSHOCKING NEWS: ಬ್ಯಾಡ್ಮಿಂಟನ್ ಆಡಿ ಕುಳಿತುಕೊಳ್ಳುತ್ತಿದ್ದಂತೆ ಕುಸಿದುಬಿದ್ದ ಆಟಗಾರ; ಹೃದಯಾಘಾತದಿಂದ ಸಾವು

SHOCKING NEWS: ಬ್ಯಾಡ್ಮಿಂಟನ್ ಆಡಿ ಕುಳಿತುಕೊಳ್ಳುತ್ತಿದ್ದಂತೆ ಕುಸಿದುಬಿದ್ದ ಆಟಗಾರ; ಹೃದಯಾಘಾತದಿಂದ ಸಾವು

ಶಿವಮೊಗ್ಗ: ಬ್ಯಾಡ್ಮಿಂಟನ್ ಆಟಗಾರರೊಬ್ಬರು ಕ್ರೀಡಾಂಗಣದಲ್ಲಿಯೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ನಡೆದಿದೆ.

ಮಲ್ಲಿಕಾರ್ಜುನ (50) ಮೃತ ದುರ್ದೈವಿ. ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರೂ ಆಗಿರುವ ಮಲ್ಲಿಕಾರ್ಜುನ್ ಇಂದು ಬೆಳಿಗ್ಗೆ ನಗರದ ನೆಹರು ಸ್ಟೇಡಿಯಂ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬಾಡ್ಮಿಂಟನ್ ಆಡಿ ವಿಶ್ರಾಂತಿಗೆಂದು ಕುಳಿತುಕೊಂಡಿದ್ದರು. ಕುಳಿತಲ್ಲಿಯೇ ಏಕಾಏಕಿ ಕುಸಿದು ಬಿದ್ದು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಲ್ಲಿಕಾರ್ಜುನ್ ಕೆಇಬಿ ಅಧಿಕಾರಿಯಾಗಿ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಡಯಟ್ ಆಫೀಸರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಬ್ಯಾಡ್ಮಿಂಟನ್ ಆಡಿ ಕುಳಿತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದು, ಕ್ರಿಡಾಂಗಣದಲ್ಲಿದ್ದವರು ಶಾಕ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular