HomeEntertainment'ಬ್ಯಾಡ್ ಮ್ಯಾನರ್ಸ್' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಷ್ ಅಭಿನಯದ ಬಹುನಿರೀಕ್ಷಿತ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ.

ಕಪಿಲ್ ಕಪಿಲನ್ ಹಾಗೂ ನಾರಾಯಣ್ ಶರ್ಮ ಈ ಗೀತೆಯನ್ನು ಹಾಡಿದ್ದು, ಚರಣ್ ರಾಜ್ ಸಂಗೀತ ಹಾಗೂ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದೆ. ಈ ಹಾಡು ಬಿಡುಗಡೆಯಾದ 15 ನಿಮಿಷಗಳಲ್ಲಿ 3000 ವೀಕ್ಷಣೆ ಪಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟುಡಿಯೋ 18f ಬ್ಯಾನರ್ ನಡಿ ಸುದೀರ್ ಕೆಎಂ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಭಿಷೇಕ್ ಅಂಬರೀಶ್ ಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಿದ್ದಾರೆ.

ಹಿರಿಯ ನಟಿ ತಾರಾ ಸೇರಿದಂತೆ ಶರತ್ ಲೋಹಿತಾಶ್ವ, ದತ್ತಣ್ಣ, ಕುರಿ ಪ್ರತಾಪ್, ಮಿತ್ರ, ಬ್ಯಾಂಕಾಕ್ ದಿಲೀಪ್, ಪ್ರಿಯಾಂಕ ಕುಮಾರ್, ತ್ರಿವಿಕ್ರಂ, ರಾಜು ಹಿರೇಮಠ, ಪಂಕಜ್ ಬಾಬು, ಶ್ರೀನಿವಾಸ ಸೇರಿದಂತೆ ಹಲವಾರು ಕಲಾವಿದರ ದಂಡೆ ಈ ಸಿನಿಮಾದಲ್ಲಿದೆ.

For Latest News Updates, Join Our Whatsapp Community🚩
RELATED ARTICLES

Most Popular