HomeUncategorizedಮೂರನೇ ಮಹಾಯುದ್ಧ, ಏಲಿಯನ್‌ಗಳ ಆಗಮನ! ಬೆಚ್ಚಿಬೀಳಿಸುವಂತಿದೆ ಬಾಬಾ ವಂಗಾ ಅವರ 2026ರ ಭವಿಷ್ಯವಾಣಿ

ಮೂರನೇ ಮಹಾಯುದ್ಧ, ಏಲಿಯನ್‌ಗಳ ಆಗಮನ! ಬೆಚ್ಚಿಬೀಳಿಸುವಂತಿದೆ ಬಾಬಾ ವಂಗಾ ಅವರ 2026ರ ಭವಿಷ್ಯವಾಣಿ

2026ನೇ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ, ಬಲ್ಗೇರಿಯಾದ ಅಂಧ ಪ್ರವಾದಿ ಬಾಬಾ ವಂಗಾ (Baba Vanga) ಅವರ ಭವಿಷ್ಯವಾಣಿಗಳು ಇಡೀ ಜಗತ್ತಿನಲ್ಲಿ ಸಂಚಲನ ಮೂಡಿಸಿವೆ. ಸೆಪ್ಟೆಂಬರ್ 11ರ ದಾಳಿ ಮತ್ತು ಬ್ರಿಟನ್ ಪ್ರವಾಹದಂತಹ ಘಟನೆಗಳನ್ನು ದಶಕಗಳ ಹಿಂದೆಯೇ ನಿಖರವಾಗಿ ನುಡಿದಿದ್ದ ಇವರ ಮಾತುಗಳನ್ನು ಇಂದಿಗೂ ಜನರು ಭಯ ಮತ್ತು ಕುತೂಹಲದಿಂದಲೇ ಗಮನಿಸುತ್ತಾರೆ.

2026ರ ಕುರಿತಾದ ಪ್ರಮುಖ ಭವಿಷ್ಯವಾಣಿಗಳು ಇಲ್ಲಿವೆ:

1. ಮೂರನೇ ಮಹಾಯುದ್ಧದ ಭೀತಿ: ಬಾಬಾ ವಂಗಾ ಅವರ ಪ್ರಕಾರ, 2026ರಲ್ಲಿ ಜಗತ್ತು ಮೂರನೇ ಮಹಾಯುದ್ಧಕ್ಕೆ ಸಾಕ್ಷಿಯಾಗಲಿದೆ. ಚೀನಾ-ತೈವಾನ್ ನಡುವಿನ ಉದ್ವಿಗ್ನತೆ ಮತ್ತು ರಷ್ಯಾ-ಅಮೆರಿಕ ನಡುವಿನ ನೇರ ಸಂಘರ್ಷವು ಈ ಮಹಾಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಅವರು ನುಡಿದಿದ್ದಾರೆ. ಇದು ಜಗತ್ತಿನಾದ್ಯಂತ ಭಾರೀ ನಾಶಕ್ಕೆ ಕಾರಣವಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ಏಲಿಯನ್‌ಗಳ ಜೊತೆ ಮೊದಲ ಸಂಪರ್ಕ: ಎಲ್ಲರನ್ನೂ ಅಚ್ಚರಿಗೊಳಿಸುವ ಭವಿಷ್ಯವಾಣಿಯೆಂದರೆ, 2026ರ ನವೆಂಬರ್ ತಿಂಗಳಿನಲ್ಲಿ ಮಾನವರು ಮೊದಲ ಬಾರಿಗೆ ಅನ್ಯಗ್ರಹ ಜೀವಿಗಳ (Extraterrestrial Life) ಜೊತೆ ಸಂಪರ್ಕ ಸಾಧಿಸಲಿದ್ದಾರೆ. ದೈತ್ಯ ಬಾಹ್ಯಾಕಾಶ ನೌಕೆಯೊಂದು ಭೂಮಿಯ ವಾತಾವರಣಕ್ಕೆ ಪ್ರವೇಶಿಸಲಿದೆ ಎಂದು ಅವರು ಹೇಳಿದ್ದಾರೆ.

3. ಮನುಷ್ಯನನ್ನು ಆಳುವ ಕೃತಕ ಬುದ್ಧಿಮತ್ತೆ (AI): ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆಯೂ ಅವರು ಆತಂಕಕಾರಿ ಮಾತುಗಳನ್ನಾಡಿದ್ದಾರೆ. 2026ರ ವೇಳೆಗೆ ಕೃತಕ ಬುದ್ಧಿಮತ್ತೆ (AI) ಎಷ್ಟೊಂದು ಶಕ್ತಿಶಾಲಿಯಾಗಲಿದೆ ಎಂದರೆ, ಅದು ಮಾನವನ ದೈನಂದಿನ ಜೀವನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲಿದೆ. ಮನುಷ್ಯರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಇದು ಕಿತ್ತುಕೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

4. ನೈಸರ್ಗಿಕ ವಿಕೋಪಗಳ ಅಬ್ಬರ: ಮುಂದಿನ ವರ್ಷ ಭೂಮಿಯು ಹಿಂದೆಂದೂ ಕಾಣದಂತಹ ಭೀಕರ ಭೂಕಂಪ, ಸುನಾಮಿ, ಪ್ರವಾಹ ಮತ್ತು ಅತಿಯಾದ ತಾಪಮಾನದಂತಹ (Heatwaves) ನೈಸರ್ಗಿಕ ವಿಕೋಪಗಳನ್ನು ಎದುರಿಸಲಿದೆ ಎಂದು ವಂಗಾ ಎಚ್ಚರಿಸಿದ್ದಾರೆ.

1996ರಲ್ಲಿ ನಿಧನರಾದ ಬಾಬಾ ವಂಗಾ ಅವರು 5079ರ ವರೆಗಿನ ಭವಿಷ್ಯವನ್ನು ನುಡಿದು ಹೋಗಿದ್ದಾರೆ. ಇವರು ನುಡಿದ ಹಲವು ಸಂಗತಿಗಳು ಈಗಾಗಲೇ ನಿಜವಾಗಿರುವುದರಿಂದ, 2026ರ ಈ ಭವಿಷ್ಯವಾಣಿಗಳು ಜನರಲ್ಲಿ ನಡುಕ ಹುಟ್ಟಿಸಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular