HomeKarnatakaಹಗರಣಗಳಿಂದ ಗಬ್ಬೆದ್ದು ನಾರುತ್ತಿರುವ ಕಾಂಗ್ರೆಸ್‌ ಸರ್ಕಾರ: 'ತ್ಯಾಜ್ಯ’ ಎಂದು ಸರ್ಕಾರವನ್ನೇ ವಿಲೇವಾರಿ ಮಾಡಲು ಮುನ್ನುಡಿ ಬರೆಯಲಿದ್ದಾರೆ...

ಹಗರಣಗಳಿಂದ ಗಬ್ಬೆದ್ದು ನಾರುತ್ತಿರುವ ಕಾಂಗ್ರೆಸ್‌ ಸರ್ಕಾರ: ‘ತ್ಯಾಜ್ಯ’ ಎಂದು ಸರ್ಕಾರವನ್ನೇ ವಿಲೇವಾರಿ ಮಾಡಲು ಮುನ್ನುಡಿ ಬರೆಯಲಿದ್ದಾರೆ ಬೆಂಗಳೂರಿಗರು: ಬಿ.ವೈ.ವಿಜಯೇಂದ್ರ

ಬೆಂಗಳೂರು: ಜನರ ಹಣ ಲೂಟಿ ಮಾಡಲು ಚಿನ್ನದ ಗಣಿಗೇ ಕೈ ಹಾಕಬೇಕಾಗಿಲ್ಲ, ಕಸದಿಂದಲೂ ಲೂಟಿ ಮಾಡುವ ಕಲೆ ನಮಗೆ ಸಿದ್ಧಿಸಿದೆ ಎಂಬುದನ್ನು ಕರ್ನಾಟಕ ಕಾಂಗ್ರೆಸ್ ‌ ಸರ್ಕಾರ ಸಾಬೀತು ಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

39 ಸಾವಿರ ಕೋಟಿ ತ್ಯಾಜ್ಯ ಹಗರಣವನ್ನು ನಮ್ಮ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಬಯಲಿಗೆಳೆದಿದ್ದಾರೆ. ಈ ಸಂಬಂಧ ನಮ್ಮ ಪಕ್ಷ ರಾಜ್ಯಪಾಲರಿಗೆ ದೂರನ್ನು ನೀಡಿದೆ.

ನಮ್ಮ ಗುತ್ತಿಗೆದಾರರನ್ನು ಬದಿಗೆ ಸರಿಸಿ, ಕಪ್ಪು ಪಟ್ಟಿಯಲ್ಲಿರುವ ದೆಹಲಿ ಮೂಲದ ರಾಮ್ ಕಿ ಕಂಪನಿಗೆ ಕೆಲ ಸಚಿವರುಗಳ ವಿರೋಧದ ನಡುವೆಯೂ 35 ವರ್ಷಗಳ ಸುದೀರ್ಘ ಕಾಲ ಗುತ್ತಿಗೆ ನೀಡಿ, 10 ಸಾವಿರ ಕೋಟಿ ರೂ ಕಿಕ್ ಬ್ಯಾಕ್ ಪಡೆದಿರುವ ಈ ಹಗರಣ ಕಾಂಗ್ರೆಸ್‌ ಸರ್ಕಾರದ ಲೂಟಿ ಹಗರಣದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಅಭಿವೃದ್ಧಿ ಮಾಡುವ, ಬೆಂಗಳೂರನ್ನು ಸ್ವಚ್ಛಗೊಳಿಸುವ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಸ್ವಚ್ಛಗೊಳಿಸಲು ಹೊರಟಿರುವುದು ಲಜ್ಜೆಗೇಡಿತನದ ಭ್ರಷ್ಟಾಚಾರದ ಪರಮಾವಧಿಯಾಗಿದೆ. ಹಗರಣಗಳಿಂದ ಗಬ್ಬೆದ್ದು ನಾರುತ್ತಿರುವ ಈ ಕಾಂಗ್ರೆಸ್‌ ಸರ್ಕಾರ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯಲ್ಲೂ ಸಾವಿರಾರು ಕೋಟಿ ಲೂಟಿ ಹೊಡೆಯುವ ಮೂಲಕ ಭ್ರಷ್ಟಾಚಾರದ ದುರ್ಗಂಧವನ್ನು ಸುಂದರ ಬೆಂಗಳೂರಿಗೆ ಪಸರಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಕೂಡಲೇ ಈ ಗುತ್ತಿಗೆಯನ್ನು ರದ್ದುಪಡಿಸಿ, ಪಾರದರ್ಶಕತೆಯನ್ನು ಕಾಯ್ದುಕೊಂಡು ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸುವ ಕ್ರಮಕ್ಕೆ ಮುಂದಾಗಲಿ. ಇಲ್ಲದಿದ್ದರೆ ಈ ಕಾಂಗ್ರೆಸ್‌ ಸರ್ಕಾರವನ್ನೇ ತ್ಯಾಜ್ಯ ಎಂದು ರಾಜ್ಯದ ಜನತೆ ಪರಿಗಣಿಸಿ ವಿಲೇವಾರಿ ಮಾಡುತ್ತಾರೆ, ಇದಕ್ಕೆ ಬೆಂಗಳೂರಿಗರು ಮುನ್ನುಡಿ ಬರೆಯಲಿದ್ದಾರೆ. ಈ ಗುತ್ತಿಗೆ ರದ್ದು ಮಾಡಲು ಆಗ್ರಹಿಸಿ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ಎಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular