ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರಸ್ನಾನ ಮಾಡಿದ ಬಿ.ವೈ ವಿಜಯೇಂದ್ರ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭಾಗಿಯಾಗಿದ್ದಾರೆ. ಮಹಾಕುಂಭಮೇಳದಲ್ಲಿ ಭಾಗಿಯಾದ ಬಿ.ವೈ ವಿಜಯೇಂದ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಈ ಬಗ್ಗೆ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಇಡೀ ವಿಶ್ವದ ಧರ್ಮಾತೀತ ಆಸ್ತಿಕರನ್ನು ಸೂಜಿಗಲ್ಲಿನಂತೆ ಬರಸೆಳೆದು ಜಾಗತಿಕ ಇತಿಹಾಸ ಬರೆಯುತ್ತಿರುವ 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್ ರಾಜ್ ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದದ್ದು ಪುನೀತ ಭಾವ ಮೂಡಿಸಿತು. ಜಾಗತಿಕ ಶಾಂತಿಗಾಗಿ, ದೇಶದ ಕಲ್ಯಾಣಕ್ಕಾಗಿ ಕರುನಾಡ ಜನರ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಈ ಕುಂಭಮೇಳ ಫೆಬ್ರವರಿ 28ರ ಕೊನೆಯ ದಿನದವರೆಗೂ ಹರಿದು ಬರುವ ಭಕ್ತ ಸಾಗರಕ್ಕೆ ಪುಣ್ಯ ಲಭಿಸಲಿ, ಯಾವುದೇ ಅವಘಡಗಳು ಸಂಭವಿಸದಿರಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು. ಪರಮಪೂಜ್ಯ ಋಷಿ ಮುನಿಗಳ ಆಶೀರ್ವಾದ ನವ ಚೈತನ್ಯ ಮೂಡಿಸಿತು ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read