HomeLatest NewsBIG NEWS: ತಂತ್ರ-ಕುತಂತ್ರಕ್ಕೂ ಮಿತಿ ಇದೆ: ನವೆಂಬರ್ ನಲ್ಲಿ ರಾಜಕೀಯ ಬದಲಾವಣೆ ನಿಶ್ಚಿತ ಎಂದ ಬಿ.ವೈ.ವಿಜಯೇಂದ್ರ

BIG NEWS: ತಂತ್ರ-ಕುತಂತ್ರಕ್ಕೂ ಮಿತಿ ಇದೆ: ನವೆಂಬರ್ ನಲ್ಲಿ ರಾಜಕೀಯ ಬದಲಾವಣೆ ನಿಶ್ಚಿತ ಎಂದ ಬಿ.ವೈ.ವಿಜಯೇಂದ್ರ

ಮೈಸೂರು: ತಂತ್ರ-ಕುತಂತ್ರಕ್ಕೂ ಒಂದು ಮಿತಿಯಿದೆ. ರಾಜ್ಯ ರಾಜಕೀಯದಲ್ಲಿ ಬದಲಾವಣೆ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ರಾಜಕೀಯದಲ್ಲಿ ನವೆಂಬರ್ ನಲ್ಲಿ ಬದಲಾವಣೆ ನಿಶ್ಚಿತ. ಬಿಜೆಪಿ ವಿಪಕ್ಷವಾಗಿ ತನ್ನ ಕೆಲಸ ಮಾಡುತ್ತದೆ. ಸಿಎಂ ಬದಲವಣೆಯಾಗುವುದು ಖಚಿತವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಮಯ ಬಂದಿದೆ. ಹಾಗಾಗಿ ಹೈಕಮಾಂಡ್ ಬೆದರಿಸಲು ಸಮಾವೇಶಗಳನ್ನು ಮಾಡುತ್ತಿದ್ದಾರೆ. ಸಿಎಂ ಸ್ಥಾನ ಅಲ್ಲಾಡುತ್ತಿರುವುದರಿಂದಲೇ ಈ ರೀತಿ ಸಮಾವೇಶಗಳನ್ನು ಮಾಡಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಭೇಟಿಗೂ ಅವಕಾಶವನ್ನು ನೀಡಿಲ್ಲ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಸಾಧನಾ ಸಮಾವೇಶದ ಹೆಸರಲ್ಲಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಏನು ಸಾಧನೆಗಳನ್ನು ಮಾಡಿದ್ದಾರೆ ಎಂದು ಸಮಾವೇಶ? ಯಾವ ಸಮಾವೇಶಗಳೂ ಈ ಬಾರಿ ಕೆಲಸ ಮಾಡುವುದಿಲ್ಲ. ರಾಜ್ಯದಲ್ಲಿ ರಾಜಕೀಯವಾಗಿ ಬೆಳವಣಿಗೆಗಳು ಆಗುತ್ತಿವೆ. ನವೆಂಬರ್ ನಲ್ಲಿ ಬದಲಾವಣೆ ನಿಶ್ಚಿತ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular