HomeKarnatakaನೀನು ಮತ್ತೆ ಗೆದ್ದರೆ ನಾನು ನಿನ್ನ ಮನೆ ವಾಚ್ ಮೆನ್ ಆಗುವೆ; ನೀನು ಸೋತರೆ HDK...

ನೀನು ಮತ್ತೆ ಗೆದ್ದರೆ ನಾನು ನಿನ್ನ ಮನೆ ವಾಚ್ ಮೆನ್ ಆಗುವೆ; ನೀನು ಸೋತರೆ HDK ಮನೆಯ ವಾಚ್ ಮೆನ್ ಆಗುವೆಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು

ಚಿಕ್ಕಬಳ್ಳಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀನು ಮತ್ತೆ ಗೆದ್ದರೆ ನಾನು ನಿನ್ನ ಮನೆಯ ವಾಚ್ ಮೆನ್ ಆಗುವೆ. ನಿನಗೆ ಸೆಲ್ಯೂಟ್ ಹೊಡೆಯುವೆ. ಒಂದು ವೇಳೆ ನೀನು ಸೋತರೆ ಹೆಚ್.ಡಿ.ಕುಮಾರಸ್ವಾಮಿ ಮನೆಯ ವಾಚ್ ಮೆನ್ ಆಗುವೆಯಾ? ಗಂಡಸಾಗಿದ್ದರೆ ನನ್ನ ಈ ಸವಾಲು ಸ್ವೀಕರಿಸು ಎಂದು ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎನ್.ರವಿಕುಮಾರ್, ಜೆಡಿಎಸ್ ಪಕ್ಷ ದೇವೇಗೌಡತ್ರು, ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದರೆ ಸಹಿಸುವುದಿಲ್ಲ. ಕುಮಾರಸ್ವಾಮಿಯವರು ಎಲ್ಲಿಯಾದರೂ ಪ್ರದೀಪ್ ಈಶ್ವರ್ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರಾ? ಮಾಡಿದ್ದರೆ ನಾಅನು ಪ್ರದೀಪ್ ಅವರ ಕ್ಷಮೆ ಕೇಳುತ್ತೇನೆ. ಆದರೆ ಹೆಚ್.ಡಿ.ಕುಮಾರಸ್ವಾಮಿಯವರು ಸುಮ್ಮನಿದ್ದರೂ ಅವರ ವಿರುದ್ಧ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರದೀಪ್ ಈಶ್ವರ್, ತಾನು ಪ್ರಧಾನಿ ಮೋದಿ, ಜೆಡಿಎಸ್ ಪಕ್ಷ ಹಾಗೂ ಜೆಡಿಒಎಸ್ ನಾಯಕರ ವಿರುದ್ಧ ಮಾತನಾಡಿದರೆ ನನ್ನನ್ನು ಸಚಿವರನ್ನಾಗಿ ಮಾಡುತ್ತಾರೆ ಎಂಬ ಭ್ರಮೆಯಲಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸ್ಥಳೀಯ ಚುನಾವಣೆಯಲ್ಲಿಯೇ ಇವರಿಗೆ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಳೆದ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆಲುವಿಗೆ ಜೆಡಿಎಸ್ ಕೊಡುಗೆಯೂ ಇದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬ್ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಆ ಪಕ್ಷದ ಮುಖಂಡರೇ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಾಸಕ ಪ್ರದೀಪ್ ಈಶ್ವರ್ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ. ಸ್ವಪಕ್ಷದ ಮುಖಂಡರೇ ಪ್ರದೀಪ್ ಈಶ್ವರ್ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular