ಬೆಂಗಳೂರು: ಮೊನ್ನೆ ಬೇಬಿ ಯಡಿಯೂರಪ್ಪನವರು ದಾವಣ್ಗೆರೆ, ಚಿತ್ರದುರ್ಗದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಚೆಕ್ ಮೂಲಕ ಲಂಚಪಡೆದು ಜೈಲಿಗೋಗಿರುವ ಇತಿಹಾಸ ಈ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಬೇಬಿ ಯಡುಯೂರಪ್ಪನವರ ಪಿತಾಮಹ ಬಿ.ಎಸ್.ಯಡಿಯೂರಪ್ಪನವರು. ಈ ಇತಿಹಾಸವನ್ನು ಬೇಭಿ ಯಡಿಯೂರಪ್ಪನವರಾದ ವಿಜಯೇಂದ್ರ ನೆನಪಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಕೆ.ಹರಿಪ್ರಸಾದ್, ವಿಜಯೇಂದ್ರ ಅವರನ್ನು ಬೇಬಿ ಯಡಿಯೂರಪ್ಪ ಎಂದು ವ್ಯಂಗ್ಯವಾಡಿದ್ದು, ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದ ನಿಮ್ಮ ತಂದೆ ಯಡಿಯೂರಪ್ಪನವರ ಇತಿಹಾಸವನ್ನು ನೆನಪಿಸಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಹೀಗಿರುವಾಗ ನೈತಿಕತೆಯ ಪಾಠವನ್ನು ಇವರು ಕಾಂಗ್ರೆಸ್ ಪಕ್ಷದವರಿಗೆ ಹೇಳುತ್ತಿದ್ದಾರೆ. ಸೋನಿಯಾ ಗಾಂಧಿ ಮೇಲೆ ಕೇಸ್ ಇಲ್ವಾ? ರಾಹುಲ್ ಗಾಂಧಿ ಮೇಲೆ ಕೇಸ್ ಇಲ್ವಾ? ನ್ಯಾಷನಲ್ ಹೆರಾಲ್ಡ್ ಕೇಸ್ ಇಲ್ವಾ? ಎನ್ನುತ್ತಿದ್ದಾರೆ. ಗೆ ಮಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ನಲ್ಲಿ ಅವ್ಯವಹಾರವಾಗಿದ್ದರೆ ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ. ಕೇಸ್ ಹಾಕಲಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಬಗ್ಗೆ ಮಾತನಾಡುವ ಬೇಬಿ ಯಡಿಯೂರಪ್ಪ, ತಮ್ಮ ನಾಯಕರ ಮೇಲಿನ ಆರೋಪಗಳಿಗೆ ಉತ್ತರಿಸಿದ್ದರೆ ಚೆನ್ನಾಗಿತ್ತು ಎಂದಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವು 10 ವರ್ಷದಿಂದ ನಡೆಯುತ್ತಿದೆ. ಅದು ನ್ಯಾಷನಲ್ ಹೆರಾಲ್ಡ್ ಕಂಪನಿ ಆ್ಯಕ್ಟ್ನಲ್ಲಿದೆ. ಇದರಲ್ಲಿ 10 ರೂ ತೆಗೆದುಕೊಳ್ಳಲು ಆಗುವುದಿಲ್ಲ, 10 ರೂ ಕೊಡಲು ಆಗುವುದಿಲ್ಲ. ಕೇಂದ್ರದಲ್ಲಿ ಸರ್ಕಾರ ತಮ್ಮದೇ ಇರುವುದರಿಂದ, ಏನಾದರೂ ಅವ್ಯವಹಾರ ನಡೆದಿರುವುದು ಸಾಬೀತಾದರೆ, ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವಂತೆ ಸವಾಲು ಹಾಕಿದರು.
ಭ್ರಷ್ಟಾಚಾರ ಲಂಚ ಸ್ವೀಕರಿಸಿರುವ ಆರೋಪ, ಅಪ್ರಾಪ್ತ ಮಗುವಿನ ಮೇಲೆ ದೌರ್ಜನ್ಯವೆಸಗಿರುವ ಗಂಭೀರ ಆರೋಪ ಅವರ ನಾಯಕರ ಮೇಲಿದೆ. ಅಂತವರ ಮನೆಯ ಹುಡುಗ ಇಂದು ಕಾಂಗ್ರೆಸ್ ನಾಯಕರ ಬಗ್ಗೆ ಆರೋಪ ಮಾಡುತ್ತಿದ್ದಾನೆ. ನೈತಿಕತೆಯ ಪಾಠ ಕಾಂಗ್ರೆಸ್ ನವರಿಗೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಅಯೋಧ್ಯೆ ರಾಮ ಮಂದಿರದಲ್ಲಿ ಹುಂಡಿ ಹಣ ಕಳ್ಳತನವಾಗಿರುವ ವಿಚಾರವಾಗಿ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ರಾಮ ಮಂದಿರ ಹುಂಡಿಯ ಹಣ ಈ ದೇಶದ ಸಾಮಾನ್ಯಜನರು ನೀಡಿದ ಕಾಣಿಕೆ, ದೇಣಿಗೆ ಹಣ. ಅದು ಬಿಜೆಪಿಯವರ ಹಣವಲ್ಲ ಅಥವಾ ಒಂದು ಪಕ್ಷದ ಹಣವಲ್ಲ. ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಅಲ್ಲಿರುವುದು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ. ಅಂದರೆ ಚೌಕಿದಾರರೂ ಇವರೇ. ರಾಮ ಮಂದಿರ ಹಗರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ನಮಗೇನೂ ಇಲ್ಲ. ಕಾರಣ ಉತ್ತರ ಪ್ರದೇಶದಲ್ಲಿ ನಡೆಯುವ ಹಗರಣ, ಭ್ರಷ್ಟಾಚಾರ, ಅನಾಚಾರಗಳು ಯಾವವೂ ಹೊರಗೆ ಬರಲ್ಲ. ಅದು ಕೇಂದ್ರ ಸರ್ಕಾರದ ನಿಗಾದಲ್ಲಿ ನಡೆಯುತ್ತವೆ. ಹಾಗಾಗಿ ನಮಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.

