HomeKarnatakaBIG NEWS: ಗೋಧ್ರಾ ರೀತಿ ಘಟನೆ ಹೇಳಿಕೆ: ಸಿಸಿಬಿಯಿಂದ ಬಿ.ಕೆ.ಹರಿಪ್ರಸಾದ್ ವಿಚಾರಣೆ; ನನ್ನನ್ನು ಬೇಕಿದ್ದರೆ ಅರೆಸ್ಟ್...

BIG NEWS: ಗೋಧ್ರಾ ರೀತಿ ಘಟನೆ ಹೇಳಿಕೆ: ಸಿಸಿಬಿಯಿಂದ ಬಿ.ಕೆ.ಹರಿಪ್ರಸಾದ್ ವಿಚಾರಣೆ; ನನ್ನನ್ನು ಬೇಕಿದ್ದರೆ ಅರೆಸ್ಟ್ ಮಾಡಿ ಎಂದ ಎಂಎಲ್ ಸಿ

ಬೆಂಗಳೂರು: ರಾಜ್ಯದಲ್ಲಿಯೂ ಗೋಧ್ರಾ ರೀತಿಯ ಘಟನೆ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿರುವ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಬಿ.ಕೆ.ಹರಿಪ್ರಸಾದ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು. ಇದೇ ವೇಳೆ ಪೊಲೀಸರ ವಿರುದ್ಧ ಗರಂ ಆದ ಬಿ.ಕೆ.ಹರಿಪ್ರಸಾದ್, ನನಗೆ ವಿವಿಐಪಿ ಟ್ರೀಟ್ ಮೆಂಟ್ ಬೇಡ. ಬೇಕಾದರೆ ಅರೆಸ್ಟ್ ಮಾಡಿ ಎಂದು ಹೇಳಿದ್ದಾರೆ.

ಇದು ಕಾಂಗ್ರೆಸ್ ಸರ್ಕಾರವೇ? ಅಥವಾ ಆರ್.ಎಸ್.ಎಸ್ ಸರ್ಕಾರವೇ? ನಾನು ಯಾವ ಸರ್ಕಾರದಲ್ಲಿ ಇದ್ದೇನೆ ಅರ್ಥವಾಗುತ್ತಿಲ್ಲ. ಬೇಕಾದರೆ ಮಂಪರು ಪರೀಕ್ಷೆ ಮಾಡಿ. ನನ್ನ ಜೊತೆ ವಿಜಯೇಂದ್ರಗೂ ಮಂಪರು ಪರೀಕ್ಷೆಗೆ ಒಳಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular