HomeKarnatakaBREAKING: ಅಯ್ಯಪ್ಪ ಮಾಲಾಧಾರಿಗಳು ನೀರುಪಾಲು ಪ್ರಕರಣ; ಓರ್ವನ ರಕ್ಷಣೆ, ಬಾಲಕನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಮುಂದುವರೆದ...

BREAKING: ಅಯ್ಯಪ್ಪ ಮಾಲಾಧಾರಿಗಳು ನೀರುಪಾಲು ಪ್ರಕರಣ; ಓರ್ವನ ರಕ್ಷಣೆ, ಬಾಲಕನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಮುಂದುವರೆದ ಶೋಧ

ಮೈಸೂರು: ಕಪಿಲಾ ನದಿಯಲ್ಲಿ ನೀರು ಪಾಲಾಗಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳಲ್ಲಿ ಓರ್ವನನ್ನು ರಕ್ಷಿಸಲಾಗಿದ್ದು, ಓರ್ವನ ಶವ ಪತ್ತೆಯಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಕಪಿಲಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಐವರು ಅಯ್ಯಪ್ಪ ಮಾಲಾಧಾರಿಗಳಲ್ಲಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇಬ್ಬರು ಈಜಿ ದಡ ಸೇರಿದ್ದರು. ಇದೀಗ ಪೊಲೀಸರು ಹಾಗೂ ಅಗ್ನಿಶಮಕ ದಳ ಸಿಬ್ಬದಿಗಳು ನೀರು ಪಾಲಾಗಿದ್ದ ಮೂವರಲ್ಲಿ ಓರ್ವನ ರಕ್ಷಣೆ ಮಾಡಿದ್ದಾರೆ.

ಓರ್ವನ ಶವ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ನೀರು ಪಾಲಾಗಿದ್ದ ಮೂವರು ತುಮಕೂರು ಜಿಲ್ಲೆಯ ಕೊರಟಗೆರೆಯವರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗವಿರಂಗ, ರಾಕೇಶ್ (19) ಹಾಗೂ ಅಪ್ಪು (16) ನೀರು ಪಾಲಾಗಿದ್ದರು. ಸದ್ಯ ಗವಿರಂಗನನ್ನು ರಕ್ಷಣೆ ಮಾಡಲಾಗಿದೆ. ಬಾಲಕ ಅಪ್ಪು ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular