HomeKarnatakaBIG NEWS: ಆಯನೂರು ಗೇಟ್ ಸ್ಮಶಾನದಲ್ಲಿ ಎಣ್ಣೆಪಾರ್ಟಿ; ಸ್ನೇಹಿತರ ನಡುವೆ ಆರ‍ಂಭವಾದ ಜಗಳ ಕೊಲೆಯಲ್ಲಿ ಅಂತ್ಯ

BIG NEWS: ಆಯನೂರು ಗೇಟ್ ಸ್ಮಶಾನದಲ್ಲಿ ಎಣ್ಣೆಪಾರ್ಟಿ; ಸ್ನೇಹಿತರ ನಡುವೆ ಆರ‍ಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ: ಸ್ಮಶಾನದಲ್ಲಿ ಆರಂಭವಾದ ಸ್ನೇಹಿತರಿಬ್ಬರ ಎಣ್ಣೆಪಾರ್ಟಿ ಗಲಾಟೆಗೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಗೇಟ್ ಬಳಿ ಸ್ಮಶಾನದಲ್ಲಿ ನಡೆದಿದೆ.

ಶಿವಮೊಗ್ಗ-ಸಾಗರ ರಸ್ತೆಯ ಆಯನೂರು ಗೇಟ್ ಬಳಿಯ ಸ್ಮಶಾನದಲ್ಲಿ ಜೆ.ಪಿ ನಗರ ನಿವಾಸಿ ರಾಜು ನಾಯ್ಕ್ ಹಾಗೂ ವಿಕ್ರಮ್ ಇಬ್ಬರೂ ಮದ್ಯಸೇವಿಸಿದ್ದು, ಕುಡಿದ ಬರದಲ್ಲಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ವಿಕ್ರಮ್, ರಾಜು ನಾಯ್ಕ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾನೆ.

ಕುಡಿದ ಮತ್ತಿನಲ್ಲಿ ವೈಯಕ್ತಿಕ ವಿಚಾರ ಪ್ರಸ್ತಾಪವಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೋಪದಲ್ಲಿ ವಿಕ್ರಮ್ ರಾಜುನನ್ನು ಹತ್ಯೆ ಮಾಡಿದ್ದಾನೆ. ಸದ್ಯ ಆರೋಪಿ ವಿಕ್ರಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular