HomeKarnatakaಡೈವೋರ್ಸ್ ಕೇಸ್ ಬಗ್ಗೆ ಬಂದಿದ್ದ ಕಕ್ಷಿದಾರ ಮಹಿಳೆ ಮೇಲೆ ನಿರಂತರ ಅತ್ಯಾಚಾರ: ವಕೀಲ ಅರೆಸ್ಟ್

ಡೈವೋರ್ಸ್ ಕೇಸ್ ಬಗ್ಗೆ ಬಂದಿದ್ದ ಕಕ್ಷಿದಾರ ಮಹಿಳೆ ಮೇಲೆ ನಿರಂತರ ಅತ್ಯಾಚಾರ: ವಕೀಲ ಅರೆಸ್ಟ್

ಕಲಬುರಗಿ: ಕಕ್ಷಿದಾರ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಕೀಲನನ್ನು ಬಂಧಿಸಲಾಗಿದೆ. ಕಲಬುರಗಿ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಲಾಕ್ ಮೇಲ್ ಮಾಡುತ್ತಿದ್ದ ವಕೀಲ ಮಲ್ಲಿನಾಥ ನರೋಣಿ ನಿರಂತರ ಅತ್ಯಾಚಾರ ಎಸುಗುತ್ತಿದ್ದ ಎಂದು ಕಕ್ಷಿದಾರ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಕೀಲನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ವಕೀಲನ ಪತ್ನಿ ಮತ್ತು ಪುತ್ರನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಸೋದರ ಮಾವನನ್ನು ಮದುವೆಯಾಗಿದ್ದ ಮಹಿಳೆ ಒಂದು ವರ್ಷದ ಬಳಿಕ ಕಲಹ ಉಂಟಾಗಿ ವಿಚ್ಛೇದನ ಕೇಸ್ ದಾಖಲಿಸಿದ್ದರು. ಮಲ್ಲಿನಾಥ ನರೋಣಿ ಮಹಿಳೆ ಪರ ವಕಾಲತ್ತು ವಹಿಸಿದ್ದರು. ಕೇಸಿನ ಬಗ್ಗೆ ಮಾತನಾಡಲು ಕರೆಸಿಕೊಂಡು ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯ ಆರೋಪಿಸಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular