HomeLatest Newsಆ್ಯಂಟಿ ಬಯೋಟಿಕ್ಸ್ ಅತಿ ಬಳಕೆ ತಪ್ಪಿಸಿ, ವೈದ್ಯರ ಶಿಫಾರಸು ಇಲ್ಲದೆ ಅಂತಹ ಔಷಧ ಬಳಸಬೇಡಿ: ಪ್ರಧಾನಿ...

ಆ್ಯಂಟಿ ಬಯೋಟಿಕ್ಸ್ ಅತಿ ಬಳಕೆ ತಪ್ಪಿಸಿ, ವೈದ್ಯರ ಶಿಫಾರಸು ಇಲ್ಲದೆ ಅಂತಹ ಔಷಧ ಬಳಸಬೇಡಿ: ಪ್ರಧಾನಿ ಮೋದಿ ಕರೆ

ನವದೆಹಲಿ: ಇತ್ತೀಚೆಗೆ ಆ್ಯಂಟಿ ಬಯೋಟಿಕ್(ರೋಗ ನಿರೋಧಕ)ಗಳ ಅತಿಯಾದ ಬಳಕೆಯಿಂದ ಅವುಗಳ ಪರಿಣಾಮ ಕಡಿಮೆಯಾಗುತ್ತಿರುವ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ವೈದ್ಯರ ಶಿಫಾರಸು ಇಲ್ಲದೆ ಅಂತಹ ಔಷಧಗಳನ್ನು ಸ್ವಯಂಪ್ರೇರಿತವಾಗಿ ಬಳಕೆ ಮಾಡದಂತೆ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಮಾಸಿಕ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ ನ್ಯುಮೋನಿಯಾ, ಮೂತ್ರನಾಳ ಸೋಂಕಿನಂತಹ ಕಾಯಿಲೆಗಳಿಗೆ ರೋಗನಿರೋಧಕ ಔಷಧಗಳು ಕೆಲಸ ಮಾಡುತ್ತಿಲ್ಲ ಎನ್ನುವ ವರದಿ ಅತ್ಯಂತ ಕಳವಳಕಾರಿಯಾಗಿದೆ. ಎಲ್ಲಾ ಸಮಸ್ಯೆಗಳಿಗೂ ಒಂದು ಮಾತ್ರೆ ಮೂಲಕ ಉಪಶಮನ ಪಡೆಯಬಹುದೆಂಬ ಜನರ ನಂಬಿಕೆ ಔಷಧಗಳ ಮನಸೋ ಇಚ್ಛೆ ಬಳಕೆಗೆ ಕಾರಣವಾಗಿದೆ. ವೈದ್ಯರ ಶಿಫಾರಸು ಹೊರತಾಗಿ ಅಂತಹ ಆ್ಯಂಟಿ ಬಯೋಟಿಕ್ ಬಳಕೆ ಮಾಡದಂತೆ ಜನರಿಗೆ ಮನವಿ ಮಾಡುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular