HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ 'ಅವತಾರ ಪುರುಷ 2'

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ಅವತಾರ ಪುರುಷ 2’

ಕಳೆದ ವಾರ ಏಪ್ರಿಲ್ 5ರಂದು ರಾಜ್ಯಾದ್ಯಂತ ತೆರೆಕಂಡಿದ್ದ ಶರಣ್ ಅಭಿನಯದ  ‘ಅವತಾರ ಪುರುಷ 2’ ಚಿತ್ರ, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ರಾಜ್ಯದಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶರಣ್ ಮತ್ತು ಶ್ರೀನಗರ ಕಿಟ್ಟಿ ಅವರ ನಟನೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಹಾರರ್ ಎಂಟರ್ಟೈನ್ಮೆಂಟ್ ಕಥಾಧಾರಿತ ಈ ಚಿತ್ರದಲ್ಲಿ ಶರಣ್ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದು, ಸಾಯಿ ಕುಮಾರ್, ಸುಧಾರಾಣಿ, ಸಾಧು ಕೋಕಿಲ, ಶ್ರೀನಗರ ಕಿಟ್ಟಿ ತಾರಾ ಬಳಗದಲ್ಲಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಪುಷ್ಕರ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಮನು ಸಂಕಲನ, ವಿಕ್ರಂ ಸಾಹಸ ನಿರ್ದೇಶನವಿದೆ. ಅಭಿನಂದನ್ ಕಶ್ಯಪ್ ಸಂಗೀತ ಸಂಯೋಜನೆ ನೀಡಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular