ಅವಲಕ್ಕಿ ಉಪಯೋಗಿಸಿ ಫಟಾಫಟ್ ಉಪ್ಪಿಟ್ಟು ತಯಾರಿಸಬಹುದು. ಉಪ್ಪಿಟ್ಟು ಜೊತೆ ಕೇಸರಿ ಭಾತ್ ಇಲ್ಲದಿದ್ದರೆ ಹೇಗೆ. ಇಲ್ಲಿದೆ ಅವಲಕ್ಕಿಯಲ್ಲಿ ತಯಾರಿಸುವ ಕೇಸರಿ ಭಾತ್ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಅವಲಕ್ಕಿ-1 ಕಪ್
ಸಕ್ಕರೆ-1 ಕಪ್
ಹಾಲು-ಅರ್ಧ ಕಪ್
ತುಪ್ಪ-ಅರ್ಧ ಕಪ್
ಕೇಸರಿ ದಳ-5
ದ್ರಾಕ್ಷಿ ಗೋಡಂಬಿ-ಕಾಲು ಕಪ್
ಏಲಕ್ಕಿ ಪುಡಿ-ಕಾಲು ಚಮಚ
ಮಾಡುವ ವಿಧಾನ
ಅವಲಕ್ಕಿಯನ್ನು ತೊಳೆದು ನೀರಿನಲ್ಲಿ ನೆನೆಸಿ ಸ್ವಲ್ಪ ಹಾಲು ಹಾಕಿ ಬೇಯಿಸಿ. ಸಕ್ಕರೆ ಮತ್ತು ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ.
ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಕರಿದು ಅದಕ್ಕೆ ಹಾಲಿನಲ್ಲಿ ನೆನೆಸಿದ ಕೇಸರಿ ದಳ ಮತ್ತು ಏಲಕ್ಕಿ ಪುಡಿ ಬೆರೆಸಿ ಬೇಯುತ್ತಿರುವ ಅವಲಕ್ಕಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ತಯಾರಾದ ಅವಲಕ್ಕಿ ಕೇಸರಿ ಭಾತ್ ಅನ್ನು ಬಿಸಿ ಬಿಸಿ ಇರುವಾಗಲೇ ಸವಿಯಿರಿ.