ಬೆಂಗಳೂರು: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಕೊರತೆಯಿಂದಾಗಿ ಆಟೋ ಚಾಲಕರು ಪರದಾಡುವಂತಾಗಿದ್ದು, ಪ್ರೆಅತಿದಿನ ಆಟೋ ಚಾಲಕರು ಬಂಕ್ ಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಕ್ಲಿನಲ್ಲಿ ನಿಂತು ಕಾಯುವಂತಾಗಿದೆ. ಹಲವೆಡೆ ಸಿಎನ್ ಜಿ ಗ್ಯಾಸ್ ಗಳು ಕ್ಲೋಸ್ ಆಗಿವೆ.
ಈ ಎಲ್ಲಾ ಬೆಳವಣಿಗಳ ಬೆನ್ನಲ್ಲೇ ರಾಜ್ಯ ಸರ್ಕಾರ ಆಟೋ ಚಾಲಕರಿಗೆ ಮಹತ್ವದ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಆಟೋ ಎಲ್ ಪಿಜಿ ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಆಟೋ ಎಲ್‌ಪಿಜಿ ಸರಬರಾಜು ನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. IOCL, BPC, HPC ಕಂಪನಿಗಳಿಂದ ಗ್ಯಾಸ್ ಪೂರೈಕೆ ನಡೆಯುತ್ತಿದೆ. ಏಪ್ರಿಲ್ 2ರಿಂದ ಏಪ್ರಿಲ್ 6ರವರೆಗೆ ದಿನನಿತ್ಯ ಸರಬರಾಜು ಆಗುತ್ತಿದೆ. ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್ವರೆಗೂ ಪೂರೈಕೆ ಮಾಡಲಾಗಿದೆ. ಏಪ್ರಿಲ್ 5ರಂದು ಅತಿ ಹೆಚ್ಚು 94.11 MT ಸರಬರಾಜು ಮಾಡಲಾಗಿದೆ. ಆಟೋ ಚಾಲಕರು ಆತಂಕಪಡಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ.
ಇನ್ನು ಎಲ್‌ಪಿಜಿ ಪೂರೈಕೆ ವ್ಯವಸ್ಥೆಯನ್ನು ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಏಪ್ರಿಲ್ 5ರಂದು ಗರಿಷ್ಠ 94.11 MT ಪೂರೈಕೆಯಾಗಿದೆ. ಆಟೋ ಚಾಲಕರಿಗೆ ಆತಂಕ ಬೇಡ, ಪೂರೈಕೆ ಮೇಲೆ ಸರ್ಕಾರದ ನಿಗಾ ಇದೆ.
ದಿನಾಂಕ ಆಟೋ ಎಲ್‌ಪಿಜಿ ಸರಬರಾಜು (ಮೆಟ್ರಿಕ್ ಟನ್ನಲ್ಲಿ)
ಏಪ್ರಿಲ್ 2ರಂದು 87.78
ಏಪ್ರಿಲ್ 3ರಂದು 86.05
ಏಪ್ರಿಲ್ 4ರಂದು 84.80
ಏಪ್ರಿಲ್ 5ರಂದು 94.11
ಏಪ್ರಿಲ್ 6ರಂದು 83.58
ಸದ್ಯ ರಾಜ್ಯದಲ್ಲಿನ ಆಟೋ ಮಾಲೀಕರು ಮತ್ತು ಚಾಲಕರುಗಳು ಆತಂಕ ಪಡದೇ ಮತ್ತು ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಸಹಕರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಇನ್ನು ಕೈಗಾರಿಕಾ ವಲಯಕ್ಕೆ ಎಲ್‌ಪಿಜಿ ಹಂಚಿಕೆ ಕುರಿತು ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್ರಿಂದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಲಾಗಿದೆ.
ವಿವಿಧ ಕೈಗಾರಿಕಾ ವಲಯಗಳಿಗೆ ಶೇ.70ರಷ್ಟು LPG ಹಂಚಿಕೆಗೆ ನಿರ್ಧಾರ.
ಪಿಎನ್‌ಜಿ ಸುಧಾರಣೆ ತಂದ ರಾಜ್ಯಗಳಿಗೆ ಹೆಚ್ಚುವರಿ ಶೇ.10ರಷ್ಟು ಎಲ್‌ಪಿಜಿ
ಫಾರ್ಮಾ, ಫುಡ್, ಅಗ್ರಿಕಲ್ಚರ್ ಸೇರಿ ಪ್ರಮುಖ ವಲಯಗಳಿಗೆ ಅನಿಲ ಪೂರೈಕೆ
ಬೃಹತ್ LPG ಬಳಕೆಗೆ ದಿನಕ್ಕೆ 0.2 ಟಿಎಂಟಿ ಮಿತಿ ನಿಗದಿ
ನೈಸರ್ಗಿಕ ಅನಿಲ ಬಳಸಲು ಸಾಧ್ಯವಿಲ್ಲದ ಘಟಕಗಳಿಗೆ ಮೊದಲ ಆದ್ಯತೆ
ಸಿಜಿಡಿ ಘಟಕಗಳಿಗೆ ಪಿಎನ್‌ಜಿ ನೋಂದಣಿ ಕಡ್ಡಾಯ
ಪ್ಯಾಕೇಜಿಂಗ್, ಪೇಂಟ್, ಸ್ಟೀಲ್ ಮತ್ತು ಸೆರಾಮಿಕ್ ಘಟಕಗಳಿಗೆ ಸಿಗಲಿದೆ ನೆರವು
ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅನಿಲಪೂರೈಕೆ ವ್ಯವಸ್ಥೆ
ಮಾರ್ಚ್ 2026ರ ಬಳಕೆ ಆಧರಿಸಿ ಕೈಗಾರಿಕೆಗಳಿಗೆ ಇಂಧನ ಕೋಟಾ ನಿಗದಿ ಮಾಡಲಾಗಿದೆಬೆಂದು ತಿಳಿಸಿದೆ.

