ಟಿ20 ವಿಶ್ವಕಪ್ 2026ರಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಗಾಯದ ಸಮಸ್ಯೆ ಮತ್ತು ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಸೀಸ್ ಪಡೆ ಸೂಪರ್ 8 ಹಂತಕ್ಕೇರಲು ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಒಮಾನ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯವು ಇಂದು (ಫೆಬ್ರವರಿ 20, ಶುಕ್ರವಾರ) ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಗ್ರೂಪ್ ಬಿ ಇಂದ ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಆಸ್ಟ್ರೇಲಿಯಾ ಕೇವಲ ಗೌರವಕ್ಕಾಗಿ ಈ ಪಂದ್ಯವನ್ನು ಆಡಬೇಕಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್ವುಡ್ ಅಂತಹ ಸ್ಟಾರ್ ಬೌಲರ್ಗಳ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.
ನೇರ ಪ್ರಸಾರದ ವಿವರಗಳು :
- ಪಂದ್ಯ: ಆಸ್ಟ್ರೇಲಿಯಾ vs ಒಮಾನ್ (ಪಂದ್ಯ ಸಂಖ್ಯೆ 40, ಗ್ರೂಪ್ ಬಿ)
- ದಿನಾಂಕ: ಫೆಬ್ರವರಿ 20, 2026 (ಶುಕ್ರವಾರ)
- ಸಮಯ: ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ (ಟಾಸ್ ಸಂಜೆ 6:30ಕ್ಕೆ)
- ಸ್ಥಳ: ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂ, ಕ್ಯಾಂಡಿ (ಶ್ರೀಲಂಕಾ)
ಭಾರತದಲ್ಲಿ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
- ಟಿವಿ ಚಾನೆಲ್: ಭಾರತದಲ್ಲಿ Star Sports Network (ಸ್ಟಾರ್ ಸ್ಪೋರ್ಟ್ಸ್) ಚಾನೆಲ್ಗಳಲ್ಲಿ ನೇರ ಪ್ರಸಾರ ಲಭ್ಯವಿರುತ್ತದೆ.
- ಲೈವ್ ಸ್ಟ್ರೀಮಿಂಗ್: ಆನ್ಲೈನ್ನಲ್ಲಿ ವೀಕ್ಷಿಸಲು ಇಚ್ಛಿಸುವವರು Disney+ Hotstar ಆ್ಯಪ್ ಅಥವಾ ವೆಬ್ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
ಸಂಭವನೀಯ ಆಟಗಾರರ ಪಟ್ಟಿ :
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮ್ಯಾಟ್ ರೆನ್ಶಾ, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್/ಕ್ಯಾಮರೂನ್ ಗ್ರೀನ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ಮ್ಯಾಟ್ ಕುಹ್ನೆಮನ್.
ಒಮಾನ್: ಜತಿಂದರ್ ಸಿಂಗ್ (ನಾಯಕ), ಅಮೀರ್ ಕಲೀಮ್, ಹಮಾದ್ ಮಿರ್ಜಾ, ವಾಸಿಂ ಅಲಿ, ಮೊಹಮ್ಮದ್ ನದೀಮ್, ಜಿತೇನ್ ರಮಾನಂದಿ, ವಿನಾಯಕ್ ಶುಕ್ಲಾ (ವಿಕೆಟ್ ಕೀಪರ್), ಸುಫ್ಯಾನ್ ಮೆಹಮೂದ್, ನದೀಮ್ ಖಾನ್, ಶಾ ಫೈಸಲ್, ಶಕೀಲ್ ಅಹ್ಮದ್.

