HomeKarnatakaBREAKING : ಪ್ರವಾಸಿಗರೇ ಗಮನಿಸಿ ; ನಾಳೆ, ನಾಡಿದ್ದು ನಂದಿಬೆಟ್ಟಕ್ಕೆ ವಾಹನಗಳ ಪ್ರವೇಶ ನಿಷೇಧ |Nandi...

BREAKING : ಪ್ರವಾಸಿಗರೇ ಗಮನಿಸಿ ; ನಾಳೆ, ನಾಡಿದ್ದು ನಂದಿಬೆಟ್ಟಕ್ಕೆ ವಾಹನಗಳ ಪ್ರವೇಶ ನಿಷೇಧ |Nandi Hills

ಚಿಕ್ಕಬಳ್ಳಾಪುರ : ನಂದಿಹಿಲ್ಸ್ ಮ್ಯಾರಥಾನ್ ಸ್ಪರ್ಧೆಯ ಹಿನ್ನೆಲೆಯಲ್ಲಿ ನಂದಿಬೆಟ್ಟಕ್ಕೆ ತೆರಳುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನಾಳೆ (ಶನಿವಾರ) ರಾತ್ರಿ 12 ಗಂಟೆಯಿಂದ ನಾಡಿದ್ದು ( ಭಾನುವಾರ) ಮಧ್ಯಾಹ್ನ 12 ಗಂಟೆಯವರೆಗೆ ಕಾರಹಳ್ಳಿ ಕ್ರಾಸ್ನಿಂದ ನಂದಿಬೆಟ್ಟದವರೆಗೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿರಲಿದೆ.

ನಂದಿಹಿಲ್ಸ್ ಮ್ಯಾರಥಾನ್ನಲ್ಲಿ 10 ಕಿ.ಮೀ. ಹಾಗೂ 21 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಓಟಗಾರರು ಆಗಮಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಚಾಲನೆ ನೀಡಲಿದ್ದು, ಸ್ಪರ್ಧೆ ಸುಗಮವಾಗಿ ನಡೆಯಲು ಪೊಲೀಸರು ಮತ್ತು ಜಿಲ್ಲಾಡಳಿತ ಅಗತ್ಯ ಭದ್ರತಾ ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಸಾರ್ವಜನಿಕರು ಈ ಅವಧಿಯಲ್ಲಿ ನಂದಿಬೆಟ್ಟಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ. ನಂದಿ ಬೆಟ್ಟವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪ್ರಸಿದ್ಧ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಇದು ಸುಂದರವಾದ ಸೂರ್ಯೋದಯ, ತಂಪಾದ ಹವಾಮಾನ ಹಾಗೂ ಟಿಪ್ಪು ಅರಮನೆಗೆ ಹೆಸರುವಾಸಿಯಾಗಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular