HomeLatest NewsBIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಈ ಮಾಹಿತಿಗಳನ್ನು ಸಲ್ಲಿಸುವಂತೆ ಸರ್ಕಾರದಿಂದ...

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಈ ಮಾಹಿತಿಗಳನ್ನು ಸಲ್ಲಿಸುವಂತೆ ಸರ್ಕಾರದಿಂದ ಮಹತ್ವದ ಆದೇಶ |GOVT EMPLOYEE

ಬೆಂಗಳೂರು : ಹೆಚ್.ಆರ್.ಎಂ.ಎಸ್-2.0 ತಂತ್ರಾಂಶವು ಅಭಿವೃದ್ಧಿಯ ಹಂತದಲ್ಲಿದ್ದು ಇಲಾಖೆಗೆ /ಸರ್ಕಾರಿ ನೌಕರರಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಿ ಈ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವ ಬಗ್ಗೆ ಕೆಲವು ಮಾಹಿತಿಗಳನ್ನು ಕೋರಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ಹೆಚ್.ಆರ್.ಎಂ.ಎಸ್. – 2.0 ಯೋಜನೆಯು ಅಭಿವೃದ್ಧಿ ಹಂತದಲ್ಲಿದ್ದು ಈಗಾಗಲೇ ವೇತನ ಮಾಡ್ಯುಲ್ (Pay Roll Module) ಅನ್ನು 21 ಇಲಾಖೆಗಳಿಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಹೆಚ್.ಆರ್.ಎಂ.ಎಸ್. -2.0 ವೇತನ ಮಾಡ್ಯುಲ್ (Pay Roll Modula) ಮೂಲಕವೇ ಪ್ರಾಯೋಗಿಕವಾಗಿ ಆಯ್ಕೆ ಮಾಡಲಾದ ಈ 21 ಇಲಾಖೆಗಳ ಸರ್ಕಾರಿ ನೌಕರರಿಗೆ ವೇತನವನ್ನು ವಿಸ್ತರಿಸಲಾಗುತ್ತಿದೆ. ಮುಂದುವರೆದು, ಹೆಚ್ .ಆರ್.ಎಂ.ಎಸ್.-2.0ನ ಯೋಜನೆಯ ತಂತ್ರಾಂಶದಲ್ಲಿ 36 ಮಾಡ್ಯುಲ್ಗಳು ಅಭಿವೃದ್ಧಿಯ ಹಂತದಲ್ಲಿದ್ದು ಹಾಗೂ ಈ ಯೋಜನೆಯನ್ನು ಯಶಸ್ವಿಗೊಳಿಸಲು ಈ 36 ಮಾಡ್ಯುಲ್ಗಳು ಒಂದಕ್ಕೊಂದು ಸಮಕ್ಷಮ ಹೊಂದಾಣಿಕೆಯಿಂದ ನಡೆಸಲೇ ಬೇಕಾಗಿರುವುದರಿಂದ ಈ ಕೆಳಗಿನಂತೆ ಕೋರಿರುವ ಮಾಹಿತಿಯನ್ನು ಒದಗಿಸುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1) ಆಧಾರ್ ಜೋಡಣೆ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) (ಸರ್ಕಾರಿ ನೌಕರರ ಕುಟುಂಬ ಅವಲಂಬಿತ ಸದಸ್ಯರನ್ನು ಒಳಗೊಂಡಂತೆ), ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ (KAMS)ನ ತಂತ್ರಾಂಶಗಳು ಅಭಿವೃದ್ಧಿಯ ಹಂತದಲ್ಲಿದ್ದು, ಸರ್ಕಾರಿ ನೌಕರರಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ವಿವಿಧ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ದಾರಿಗೊಳಿಸಿ ಉಪಯೋಗಿಸಿಕೊಳ್ಳಲು ರಾಜ್ಯದ ಎಲ್ಲಾ ಸರ್ಕಾರಿ ನೌಕರರ ರೆ.ಜಿ.ಐ.ಡಿ ಮತ್ತು ಆಧಾರ್ ಜೋಡಣೆ (KGID-Adhaar Seeding) [໙: https://hrms.kamataka.gov.in 3 d DDO 3 LOGIN A SERVICE REGISTER >>> FAMILY DEPENDENT ENTRY FORM-KASS OPTION CLICK ಮಾಡಿ ಸರ್ಕಾರಿ ನೌಕರರ ಕೆ.ಜಿ.ಐ.ಡಿಯೊಂದಿಗೆ ಆಧಾರ್ ಜೋಡಣೆ (KGID – Adhaar Seeding) ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು] ಇದುವರೆಗೆ ಜೋಡಣೆ ಆಗದೆ ಇರುವ ಸಿಬ್ಬಂದಿಗಳ ಅಧಾರ್ ಜೋಡಣೆ ಬಹಳ ಅವಶ್ಯಕವಾಗಿರುವುದರಿಂದ ಆದ್ಯತೆ ಮೇರೆಗೆ ಪೂರ್ಣಗೊಳಿಸುವುದು. ಈ ಬಗ್ಗೆ ಈವರೆಗೂ ಇಲಾಖಾವಾರು ಕೆ.ಜಿ.ಐ.ಡಿಯೊಂದಿಗೆ ಆಧಾರ್ ಜೋಡಣೆಯ” ದತ್ತಾಂಶದ ಪ್ರಗತಿಯ ವರದಿಯನ್ನು ಲಗತ್ತಿಸಲಾಗಿದೆ.

ಹೆಚ್.ಆರ್.ಎಂ.ಎಸ್.-2.0 ತಂತ್ರಾಂಶದ ORGANOGRAM ನಲ್ಲಿ ನವೀಕರಿಸಬೇಕಾದ ಮಾಹಿತಿ.
[oud https://hrms2org.karnataka.gov.in/HRMS2DASHBOARD/login]
a) ವೃಂದ ಮತ್ತು ನೇಮಕಾತಿ: ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ / ಆರ್ಥಿಕ ಇಲಾಖೆಯಿಂದ ಸಮ್ಮತಿ ಪಡೆದಿರುವ ನವೀಕೃತ ಮಾಹಿತಿಯನ್ನು ನವೀಕರಿಸುವುದು.

b) ಇಲಾಖೆಯ ಕಛೇರಿಗಳ ಮಾಹಿತಿ:
ಇಲಾಖೆಯ ರಾಜ್ಯಾದ್ಯಂತ/ ದೇಶಾದ್ಯಂತ ಇರುವ ಕಛೇರಿಗಳಲ್ಲಿ ರಾಜ್ಯ ಮಟ್ಟದ, ತಾಲ್ಲೂಕು, ವಲಯ, ವೃತ್ತ, ವಿಭಾಗ ಹಾಗೂ ಇತರೆ ಹಂತಗಳಿರುವ ಇಲಾಖಾ ಕಛೇರಿಗಳ ನಿಖರವಾದ ವಿಳಾಸವನ್ನು ಕ್ರಮಾನುಗತವಾಗಿ ಹೆಚ್ .ಆರ್.ಎಂ.ಎಸ್. -2.0 ತಂತ್ರಾಂಶದ ORGANOGRAM ನಲ್ಲಿ ನವೀಕರಿಸುವುದು.

  1. ಭತ್ಯೆಗಳು:
    ಹೆಚ್.ಆರ್.ಎಂ.ಎನ್.-2.0 ತಂತ್ರಾಂಶದಲ್ಲಿ ವಿವಿಧ ಭತ್ಯೆಗಳನ್ನು ಸರ್ಕಾರಿ ನೌಕರರಿಗೆ ಸ್ವಯಂಚಾಲಿತವಾಗಿ ನೀಡುವ ಸಲುವಾಗಿ ಪ್ರತ್ಯೇಕ ಮಾಡ್ಯುಲ್ ರಚಿಸಲಾಗಿದ್ದು, ಇಲಾಖೆಯ ಹಂತದಲ್ಲಿ ವಿವಿಧ ವೃಂದ / ಪದನಾಮ/ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಆರ್ಥಿಕ ಇಲಾಖೆಯು ಹೊರಡಿಸಿರುವ ಆದೇಶಗಳನ್ವಯ [ಉಲ್ಲೇಖ: ರಾಜ್ಯ ವೇತನ ಆಯೋಗದ ಅನುಷ್ಠಾನದ ಇತ್ತೀಚಿನ ಆದೇಶಗಳು: https://www.finance.karnataka.gov.in] ನೀಡಲಾಗುತ್ತಿರುವ /ನೀಡಬಹುದಾದ ವಿವಿಧ ಭತ್ಯೆಗಳನ್ನು ಈ ಆದೇಶಗಳಲ್ಲಿರುವ ಎಲ್ಲಾ ಷರತ್ತುಗಳ ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಪರಿಷ್ಕರಿಸದಿದ್ದಲ್ಲಿ ಪ್ರಸ್ತುತ ನೀಡುತ್ತಿರುವ ವಿವಿಧ ಭತ್ಯೆಗಳು ಕಡಿತಗೊಳ್ಳಬಹುದು. ಅದ್ದರಿಂದ, ನಿಖರವಾದ ಭತ್ಯೆಗಳ ಮಾಹಿತಿಯನ್ನು ಆಯಾ ಭತ್ಯೆಗಳಿಗೆ ಸಂಬಂಧಿತ ದರಗಳನ್ನು ಮಾತ್ರ ಹೆಚ್.ಆರ್.ಎಂ.ಎಸ್ -1 ರಲ್ಲಿ ನವೀಕರಿಸುವುದು/ನಮೂದಿಸುವುದು. ಹಾಗೂ ಯಾವುದೇ ಭತ್ಯೆ ಇದರ ನಾಮ ಹಾಗೂ ಮೊತ್ತದಲ್ಲಿ ಬದಲಾವಣೆಯನ್ನು ಸೇರಿಸುವ ಅವಶ್ಯವಿದ್ದಲ್ಲಿ ಕೊಡಲೇ, P.M HRMS 2.0 ([email protected]) ಗೆ ಸೂಕ್ತ ಆದೇಶದೊಡನೆ, ತಮ್ಮ ಕೋರಿಕೆಯನ್ನು HRMS ನಲ್ಲಿ (Attach) ಸೇರಿಸಲು ಇ-ಮೇಲ್ ಮೂಲಕ ತಿಳಿಸುವುದು,
  2. ಸರ್ಕಾರಿ ನೌಕರರ ಇನ್ನಿತರ ಪ್ರಮುಖ ವಿವರಗಳು:
    ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ವಿವರಗಳಾದ. ವರ್ಗಾವಣೆಗೊಂಡ (Transfer-in & Transfer-Out) / ವರ್ಗಾವಣೆಯಾಗಬಹುದಾದ / ನಿಯೋಜಿಸಲಾದ/ ಬಡ್ತಿ ನೀಡಲಾದ / ಬಡ್ತಿ ನೀಡಲಾಗುವ /ನಿವೃತ್ತಿಹೊಂದಿರುವ / ಸ್ವಯಂ ನಿವೃತ್ತಿ ಹೊಂದಿರುವ/ ನಿವೃತ್ತಿ ಹೊಂದುತ್ತಿರುವ / ಅಮಾನತ್ತುಗೊಳಿಸಲಾದ/ವಜಾಗೊಳಿಸಲಾದ ನೌಕರರ ಜಿ.ಪಿ.ಎಫ್ / ಕೆ.ಜಿ.ಐ.ಡಿ ಪಾಲಿಸಿ ಸಂಖ್ಯೆ ಹಾಗೂ ಆ ಪಾಲಿಸಿಯ ಮಾಸಿಕ ಪ್ರೀಮಿಯಮ್, ಜಿ.ಪಿ.ಎಫ್ ನ ಮುಂಗಡ ಪಾವತಿಸುವ ಕಂತುಗಳು / ಕೆ.ಜಿ.ಐ.ಡಿ ಪಾಲಿಸಿ ಸಂಖ್ಯೆ ಹಾಗೂ ಆ ಪಾಲಿಸಿಯ ಸಾಲದ ಕಂತುಗಳನ್ನು ಹಾಗೂ ಜಿ.ಪಿ.ಎಫ್ನ ಮುಂಗಡ / ಕೆ.ಜಿ.ಐ.ಡಿ ಸಾಲದ ಪ್ರಾರಂಭ / ಮುಕ್ತಾಯದ ದಿನಾಂಕಗಳನ್ನು ಕಡ್ಡಾಯವಾಗಿ ಹೆಚ್.ಆರ್.ಎಂ.ಎಸ್ -1ರಲ್ಲಿ ಸರಿಯಾಗಿ ನಮೂದಿಸಿರಬೇಕು. ಇಲ್ಲದಿದ್ದಲ್ಲಿ ಹೆಚ್.ಆರ್.ಎಂ.ಎಸ್ – 2.0 ತಂತ್ರಾಂಶದಲ್ಲಿ ವೇತನ ಮಾಡ್ಯುಲ್ (Pay Roll Module) ನಿಂದ ನಿಮ್ಮ ಇಲಾಖೆಯ ಡಿ.ಡಿ.ಓಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ವೇತನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular