HomeKarnatakaಸಾರ್ವಜನಿಕರು, ಪ್ರವಾಸಿಗರ ಗಮನಕ್ಕೆ: ಮಾಂದಲ್ ಪಟ್ಟಿಗೆ ಪ್ರವೇಶ ನಿರ್ಬಂಧ

ಸಾರ್ವಜನಿಕರು, ಪ್ರವಾಸಿಗರ ಗಮನಕ್ಕೆ: ಮಾಂದಲ್ ಪಟ್ಟಿಗೆ ಪ್ರವೇಶ ನಿರ್ಬಂಧ

ಮಡಿಕೇರಿ: ಮಾಂದಲ್ ಪಟ್ಟಿ ಪ್ರವಾಸಿ ತಾಣದಲ್ಲಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಹಾಗೂ ಯಾವುದೇ ವಾಹನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಮಡಿಕೇರಿ ಪ್ರಾದೇಶಿಕ ವಿಭಾಗದ ಮಡಿಕೇರಿ ವಲಯದ ವ್ಯಾಪ್ತಿಯಲ್ಲಿ ಬರುವ ಮಾಂದಲ್ ಪಟ್ಟಿ ಪ್ರವಾಸಿ ತಾಣದಲ್ಲಿ ರಸ್ತೆ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದರಿಂದ ಫೆಬ್ರವರಿ, 16 ರಿಂದ 28 ರವರೆಗೆ ಮಾಂದಲ್ ಪಟ್ಟಿ ಪ್ರವಾಸಿ ತಾಣದಲ್ಲಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಹಾಗೂ ಯಾವುದೇ ವಾಹನಕ್ಕೆ ಪ್ರವೇಶವಿರುವುದಿಲ್ಲ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ಸಮೀಪವಿರುವ ಅದ್ಭುತ ಪ್ರವಾಸಿ ತಾಣ ಮಾಂದಲ್ ಪಟ್ಟಿ ಸಮುದ್ರ ಮಟ್ಟದಿಂದ ಸುಮಾರು 1600-1800 ಮೀಟರ್ ಎತ್ತರದಲ್ಲಿದೆ. ಇದನ್ನು ಮೋಡಗಳ ತಾಣ ಎಂದೂ ಕರೆಯುತ್ತಾರೆ. ಇದು ಪಶ್ಚಿಮ ಘಟ್ಟಗಳ ಪುಷ್ಪಗಿರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿದ್ದು, ಕಾಫಿ ತೋಟಗಳು, ಹಚ್ಚಹಸಿರಿನ ಬೆಟ್ಟಗಳು ಮತ್ತು ಸೂರ್ಯೋದಯ/ಸೂರ್ಯಾಸ್ತದ ಅದ್ಭುತ ದೃಶ್ಯಗಳಿಗೆ ಹೆಸರುವಾಸಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular