HomeKarnatakaಬೆಂಗಳೂರು ಜನತೆ ಗಮನಕ್ಕೆ : ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು ಜನತೆ ಗಮನಕ್ಕೆ : ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ವಿವಿಧ ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ, ನಾಡಿದ್ದು ( ಸೆ 29 ಹಾಗೂ 30) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿದ ಮಾಹಿತಿಯ ಪ್ರಕಾರ, ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಕಾರ್ಯಗಳನ್ನು ನಡೆಸುತ್ತಿರುವುದರಿಂದ ಐಟಿ ನಗರವು ಸೆಪ್ಟೆಂಬರ್ ಅಂತ್ಯದವರೆಗೆ ನಿಗದಿತ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ4 ರವರೆಗೆ ವಿದ್ಯುತ್ ಕಡಿತ ಸಂಭವಿಸುವ ನಿರೀಕ್ಷೆಯಿದೆ.

ಸೆಪ್ಟೆಂಬರ್ 29ರಂದು ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹರೇಬೋಮನಹಳ್ಳಿ ಗ್ರಾಮ ಪಂಚಾಯಿತಿ, ಬಿಲಂಕೋಟೆ ಪ್ರದೇಶ, ಹೊಸಹಳ್ಳಿ, ಹನುಮಂತಪುರ, ಕುಳ್ಳುವನಹಳ್ಳಿ, ಲಕ್ಕೇನಹಳ್ಳಿ ಹರೇಬೋಮನಹಳ್ಳಿ ಗ್ರಾಪಂ, ಗುಂಡೇನಹಳ್ಳಿ, ಕುಲವನಹಳ್ಳಿ ಗ್ರಾಪಂ ಹಾಗೂ, ದೊಡ್ಡೇರಿ, ಕುಲವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸೆಪ್ಟೆಂಬರ್ 30 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ಬೂದಿಹಾಳ, ಕಾಚನಹಳ್ಳಿ, ವೀರರಂಜಿಪುರ, ಇಕ್ಯೂಬೇಟರ್, ಐಬಿಎಂ ಡಿ4 ಬ್ಲಾಕ್, ಐಬಿಎಂ ಡಿ1 ಮತ್ತು ಡಿ2 ಬ್ಲಾಕ್, ಐಬಿಎಂ ಡಿ3 ಬ್ಲಾಕ್, ಎಫ್ 2 ಬ್ಲಾಕ್, ಎಲ್ 6 ಸೀಮೆನ್ಸ್, ಭುವನೇಶ್ವರಿ, ಯರಮಂಚನಹಳ್ಳಿ, ಫಿಡೆಲಿಟಿ, ಫಿಲಿಪ್ಸ್, ಮಾನ್ಯತಾ ರೆಸಿಡೆನ್ಸಿ, ಬಿಟಿಎಸ್ ಲೌಸೆಂಟ್, ಆಂಜ್ ಎಚ್ ಬ್ಲಾಕ್, ಸಿ 4 ಬ್ಲಾಕ್, ಗೋದ್ರೇಜ್ ಅಪಾರ್ಟ್ಮೆಂಟ್, ಹೆಬ್ಬಾಳ ಕೆಂಪಾಪುರ, ವಿನ್ಯಾಕಾ ಲೇಔಟ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್ಕ್ಲೇವ್, ಮೆಗಾ ಲೇಔಟ್, ಚಿರಂಜೀವಿ ಲೇಔಟ್. ಮಧುವನ ಎಂ2 ಬ್ಲಾಕ್, ಥಣಿಸಂದ್ರ, ಎಸ್.ಎನ್.ಕ್ಲೇರ್ಮಾಂಟ್ ಅಪಾರ್ಟ್ಮೆಂಟ್, ಕಾರ್ಲೆ, ಬಿ.ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜ್ಯೋತಿ ಲೇಔಟ್, ಮರಿಯಣ್ಣ ಪಾಳ್ಯ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular