ಬೆಂಗಳೂರು : ಸಾರ್ವಜನಿಕರು ನಾಳೆ (ಮಾ.3) ರಂದು ತಮ್ಮ 5 ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಪೊಲಿಯೋ ಲಸಿಕೆ ಹಾಕಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು “ಪೋಲಿಯೋ ಮುಕ್ತ ಭಾರತ” ನಮ್ಮ ಅಭಿಯಾನಕ್ಕೆ ನಿಮ್ಮ ಬೆಂಬಲವಿರಲಿ. 5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ. ಎರಡು ಹನಿ ಲಸಿಕೆ ನಿಮ್ಮ ಮಗುವಿನ ಭವಿಷ್ಯ ನಿರ್ಧರಿಸಲಿದೆ. ಮರೆಯದಿರಿ.. ಮಾರ್ಚ್ 3 ರ ಭಾನುವಾರದ ನಿಮ್ಮ ಮೊದಲ ಕಾರ್ಯ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವುದಾಗಿರಲಿ ಎಂದು ಮನವಿ ಮಾಡಿದ್ದಾರೆ.
ಮಗುವಿನ ಶಾಶ್ವತ ಅಂಗವೈಕಲ್ಯ ತಡೆಯಲು ಎರಡು ಹನಿ ಪಲ್ಸ್ ಪೊಲಿಯೋ ಅತ್ಯಗತ್ಯ. ಮಾರ್ಚ್ 3 ರ ಭಾನುವಾರ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವುದು ಪ್ರಮುಖ ಕೆಲಸವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಒದಗಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
"ಪೋಲಿಯೋ ಮುಕ್ತ ಭಾರತ"
ನಮ್ಮ ಅಭಿಯಾನಕ್ಕೆ ನಿಮ್ಮ ಬೆಂಬಲವಿರಲಿ.5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ.
ಎರಡು ಹನಿ ಲಸಿಕೆ ನಿಮ್ಮ ಮಗುವಿನ ಭವಿಷ್ಯ ನಿರ್ಧರಿಸಲಿದೆ.ಮರೆಯದಿರಿ.. ಮಾರ್ಚ್ 3 ರ ಭಾನುವಾರದ ನಿಮ್ಮ ಮೊದಲ ಕಾರ್ಯ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವುದಾಗಿರಲಿ.#PulsePolioDrive pic.twitter.com/sfGnv5Ard5
— Siddaramaiah (@siddaramaiah) March 2, 2024

