HomeKarnatakaಪಡಿತರ ಚೀಟಿದಾರರ ಗಮನಕ್ಕೆ : ಜೂ.27 ರೊಳಗೆ ಪಡಿತರ ಪಡೆಯಲು ಸೂಚನೆ

ಪಡಿತರ ಚೀಟಿದಾರರ ಗಮನಕ್ಕೆ : ಜೂ.27 ರೊಳಗೆ ಪಡಿತರ ಪಡೆಯಲು ಸೂಚನೆ

ಬಳ್ಳಾರಿ : ಜಿಲ್ಲಾ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವ ಜೂನ್ ತಿಂಗಳ ಪಡಿತರವನ್ನು ಎಲ್ಲಾ ಪಡಿತರ ಚೀಟಿದಾರರು ಜೂ.27 ರೊಳಗಾಗಿ ಪಡೆದುಕೊಳ್ಳಬೇಕು ಎಂದು ಉಪನಿರ್ದೇಶಕ ಮೊಹಮ್ಮದ್ ಖೈಜರ್ ಅವರು ತಿಳಿಸಿದ್ದಾರೆ.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರ ಆದೇಶದಂತೆ, ಜೂ.28 ರಿಂದ ಎನ್ಐಸಿಯವರು ಸರ್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿದ್ದು, ಜೂನ್ ತಿಂಗಳ ಪಡಿತರ ವಿತರಣಾ ಕಾರ್ಯವನ್ನು ಜೂ.27 ರೊಳಗಾಗಿ ಮುಕ್ತಾಯಗೊಳಿಸುವಂತೆ ತಿಳಿಸಿದ್ದಾರೆ.

ಆದ್ದರಿಂದ ಜಿಲ್ಲೆಯ ಎಲ್ಲಾ ಆಹಾರ ಶಿರಸ್ತೇದಾರರು, ಆಹರಾ ನಿರೀಕ್ಷಕರು ತಮ್ಮ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಜೂ.27 ರೊಳಗಾಗಿ ಪಡಿತರ ವಿತರಣಾ ಕಾರ್ಯವನ್ನು ಕಡ್ಡಾಯವಾಗಿ ಮುಕ್ತಾಯಗೊಳಿಸುವಂತೆ ಹಾಗೂ ಯಾವುದೇ ಪಡಿತರ ಚೀಟಿದಾರರಿಗೆ ಅವರ ಹಕ್ಕಿನ ಪಡಿತರ ನಿರಾಕರಣೆಯಾಗದಂತೆ ಕ್ರಮ ಕೈಗೊಳ್ಳಬೇಕು ಉಪನಿರ್ದೇಶಕ ಮೊಹಮ್ಮದ್ ಖೈಜರ್ ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular