HomeLatest NewsBIG NEWS : ವಾಹನ ಸವಾರರೇ ಗಮನಿಸಿ : ವಾಹನಗಳ ನೋಂದಣಿ/ ದಾಖಲೆಗಳ ನವೀಕರಣಕ್ಕೆ 'ಸಾರಿಗೆ...

BIG NEWS : ವಾಹನ ಸವಾರರೇ ಗಮನಿಸಿ : ವಾಹನಗಳ ನೋಂದಣಿ/ ದಾಖಲೆಗಳ ನವೀಕರಣಕ್ಕೆ ‘ಸಾರಿಗೆ ಇಲಾಖೆ’ ಸೂಚನೆ

ರಸ್ತೆಯ ಮೇಲೆ ಚಾಲನಾ ಅನುಜ್ಞಾಪತ್ರ ಹಾಗೂ ನೋಂದಣಿ/ ಅರ್ಹತಾ ಪತ್ರ/ ರಹದಾರಿ/ ಹೊಗೆ ತಪಾಸಣೆ ಪತ್ರ/ ವಿಮೆ ಇಲ್ಲದೇ ಸಂಚರಿಸುತ್ತಿರುವುದನ್ನು ಸಾಗರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಗಮನಿಸಿದ್ದು, ವಾಹನ ಮಾಲೀಕರು/ಸವಾರರು ಈ ಎಲ್ಲಾ ದಾಖಲೆಗಳನ್ನು ಪಡೆದು/ ವಾಯಿದೆಯ 15 ದಿನಗಳ ಮುಂಚಿತವಾಗಿ ನವೀಕರಿಸುವಂತೆ ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರೇಶ್ ಡಿ.ಹೆಚ್. ತಿಳಿಸಿದ್ದಾರೆ.

ಸಾಗರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವ್ಯಾಪ್ತಿಗೆ ಬರುವ ಎಲ್ಲಾ ಆಟೋರಿಕ್ಷಾ/ ಮೋಟಾರ್ ಕ್ಯಾಬ್/ಮ್ಯಾಕ್ಸಿ ಕ್ಯಾಬ್/ಹಾಗೂ ಇತರೆ ಸಾರಿಗೇತರ ವಾಹನಗಳಿಗೆ ನೋಂದಣಿ/ ಅರ್ಹತಾ ಪತ್ರ/ ರಹದಾರಿ/ ಹೊಗೆ ತಪಾಸಣೆ ಪತ್ರ/ ವಿಮೆ / ಚಾಲನಾ ಅನುಜ್ಞಾ ಪತ್ರಗಳನ್ನೊಳಗೊಂಡ ಸೂಕ್ತ ದಾಖಲೆಗಳನ್ನು ಮಾಡಿಸುವಂತೆ ಹಾಗೂ ನೋಂದಣಿ/ ಅರ್ಹತಾ ಪತ್ರಗಳ ಅವಧಿ ಮೀರಿದ ವಾಹನಗಳ ನಿಗಧಿತ ಶುಲ್ಕ ಹಾಗೂ ಅರ್ಜಿ ಸಲ್ಲಿಸಿ ವಾಹನ ತಪಾಸಿಸಲು ಕಚೇರಿಗೆ ಹಾಜರುಪಡಿಸುವಂತೆ ವಾಹನ ಮಾಲೀಕರಿಗೆ ತಿಳಿಸಲಾಗಿದೆ ತಪ್ಪಿದಲ್ಲಿ ಅಂತಹ ವಾಹನಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿರುತ್ತಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular