ರೈತರೇ ಗಮನಿಸಿ : ಜೇನು ಕೃಷಿ ತರಬೇತಿಗೆ ನೋಂದಣಿ ಪ್ರಾರಂಭ

ಧಾರವಾಡ : ತೋಟಗಾರಿಕೆ ಇಲಾಖೆ, ಧಾರವಾಡ ಹಾಗೂ ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ (ಕುಂಬಾಪೂರ ಫಾರ್ಮ) ಇವರ ಸಹಯೋಗದೊಂದಿಗೆ ರೈತರ ಸರ್ವತ್ತೋಮುಖ ಅಭಿವೃದ್ಧಿಗಾಗಿ ಜೇನು ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನವೆಂಬರ್ 14, 2025 ರಂದು ಹಮ್ಮಿಕೊಳ್ಳಲಾಗಿದೆ.

ವಿಶೇಷವಾಗಿ ವೈಜ್ಞಾನಿಕ ಜೇನು ಸಾಕಾಣಿಕೆ, ಜೇನಿನ ಉತ್ಪನ್ನಗಳು, ರಾಣಿ ಕಣಗಳ ಉತ್ಪಾದನೆ, ಇಳುವರಿ ಹೆಚ್ಚಿಸಲು ಜೇನು ನೊಣಗಳ ಪಾತ್ರ, ಸ್ಥಳಾಂತರ ಜೇನು ಕೃಷಿ ಹಾಗೂ ಜೇನಿನ ಶತ್ರುಗಳ ನಿರ್ವಹಣೆ, ಜೇನು ಸಾಕಾಣಿಕೆಯ ಪ್ರಾತ್ಯಕ್ಷಿಕೆಯನ್ನು ಅಳ್ನಾವರದ ಮಧುವನ ಕೇಂದ್ರದಲ್ಲಿ ನೀಡಲಾಗುವುದು.

ಆಸಕ್ತ ರೈತರು ಮೊಬೈಲ್ ಸಂಖ್ಯೆ:9353895519 ಗೆ ನವೆಂಬರ್ 12, 2025 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಸಹಾಯಕ ತೋಟಗಾರಿಕೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read