HomeIndiaರೈತರೇ ಗಮನಿಸಿ : ‘PM KISAN’ 18 ನೇ ಕಂತಿನ ಹಣ ಜಮಾ ಆಗಲು ತಪ್ಪದೇ...

ರೈತರೇ ಗಮನಿಸಿ : ‘PM KISAN’ 18 ನೇ ಕಂತಿನ ಹಣ ಜಮಾ ಆಗಲು ತಪ್ಪದೇ ಈ ಕೆಲಸ ಮಾಡಿ..!

ಬೆಂಗಳೂರು : ಪಿ.ಎಂ. ಕಿಸಾನ್ ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ.

e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಸೂಚನೆ ನೀಡಿದೆ.
ಪಿಎಂ ಕಿಸಾನ್ ಯೋಜನೆಯ 18 ನೇ ಕಂತನ್ನು ಪಡೆಯಲು ನೀವು ಈ ಕೆವೈಸಿಯನ್ನು ಮಾಡಿಸಿಕೊಳ್ಳಬೇಕು. ನೀವು ಇನ್ನೂ ಈ KYC ಯನ್ನು ಪೂರ್ಣಗೊಳಿಸದಿದ್ದರೆ, ನೀವು ಮೊದಲು ಈ KYC ಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಈ 18 ನೇ ಕಂತು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ನೀವು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮೊದಲು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಲಿಂಕ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ, ರೈತರು ಪಿಎಂ-ಕಿಸಾನ್ ಯೋಜನೆಯ 17 ಕಂತುಗಳನ್ನು ಪಡೆದಿದ್ದಾರೆ. ರೈತರು 18 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಆದರೆ ಈ ಕೆಲಸ ಮಾಡದಿದ್ರೆ ನಿಮಗೆ ಹಣ ಜಮಾ ಆಗಲ್ಲ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular