ಬೆಂಗಳೂರು : ವಿವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ವೆಂಕಟರಮಣ ಸ್ವಾಮಿ ವೈಕುಂಠ ಏಕಾದಶಿ ಪ್ರಯುಕ್ತ ಕೆ ಆರ್ ರಸ್ತೆಯನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಗಿನಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ದಿನಾಂಕ:30.12.2025ರಂದು ಕೋಟೆ ವೆಂಕಟರಮಣ ಸ್ವಾಮಿಯ ವೈಕುಂಠ ಏಕಾದಶಿಯ ಪ್ರಯುಕ್ತ ವಿ ವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ ಆರ್ ರಸ್ತೆ(ಶಿವಶಂಕರ್ ಸರ್ಕಲ್ ನಿಂದ ಮೆಡಿಕಲ್ ಕಾಲೇಜು ಜಂಕ್ಷನ್ ವರೆಗೆ) ಯನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ:
ಕೆ ಆರ್ ರಸ್ತೆ (ಶಿವಶಂಕರ್ ಸರ್ಕಲ್ ನಿಂದ ಮೆಡಿಕಲ್ ಕಾಲೇಜು ಜಂಕ್ಷನ್ ವರೆಗೆ)
ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:
* ಕೆ ಆರ್ ರಸ್ತೆಯಿಂದ ಮೆಡಿಕಲ್ ಕಾಲೇಜು ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು, ಶಿವಶಂಕರ್ ಸರ್ಕಲ್ ಬಳಿ ಎಡ ತಿರುವನ್ನು ಪಡೆದು ಮಕ್ಕಳ ಕೂಟ ಜಂಕ್ಷನ್ ಬಳಿ ಬಲ ತಿರುವನ್ನು ಪಡೆದು ಪಿ.ಎಂ.ಕೆ ರಸ್ತೆಯಲ್ಲಿ ಚಲಿಸಿ ಮಿಂಟೋ. ಜಂಕ್ಷನ್ ಬಳಿ ಬಲತಿರುವನ್ನು ಪಡೆದು ಮೆಡಿಕಲ್ ಕಾಲೇಜು ಜಂಕ್ಷನ್‌ಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿರುತ್ತದೆ.
* ಲಾಲ್‌ಬಾಗ್ ಪೋರ್ಟ್ ರಸ್ತೆಯಿಂದ ಮೆಡಿಕಲ್ ಕಾಲೇಜು ಜಂಕ್ಷನ್ ಕಡೆಗೆ ಹೋಗುವ ವಾಹನ ಸವಾರರು, ಶಿವಶಂಕರ್ ಸರ್ಕಲ್ ಬಳಿ ನೇರವಾಗಿ ಮುಂದೆ ಸಾಗಿ ಬಸಪ್ಪ ರಸ್ತೆ ಮಕ್ಕಳ ಕೂಟ ಜಂಕ್ಷನ್ ಬಳಿ ಬಲ ತಿರುವನ್ನು ಪಡೆದು ಪಿ.ಎಂ.ಕೆ ರಸ್ತೆಯಲ್ಲಿ ಚಲಿಸಿ ಮಿಂಟೋ ಜಂಕ್ಷನ್ ಬಳಿ ಬಲತಿರುವನ್ನು ಪಡೆದು ಮೆಡಿಕಲ್ ಕಾಲೇಜು ಜಂಕ್ಷನ್‌ಗೆ ಸಂಪರ್ಕ ಪಡೆದು ಸಂಚರಿಸಬಹುದಾಗಿರುತ್ತದೆ.

