HomeKarnatakaಬೈಕ್ ಸವಾರನಿಗೆ ಟಿಟಿ ವಾಹನ ಗುದ್ದಿಸಿ ಅಪಘಾತದ ನೆಪದಲ್ಲಿ ಹತ್ಯೆಗೆ ಯತ್ನ: ಮಾರಕಾಸ್ತ್ರಗಳಿಂದಲೂ ದಾಳಿ

ಬೈಕ್ ಸವಾರನಿಗೆ ಟಿಟಿ ವಾಹನ ಗುದ್ದಿಸಿ ಅಪಘಾತದ ನೆಪದಲ್ಲಿ ಹತ್ಯೆಗೆ ಯತ್ನ: ಮಾರಕಾಸ್ತ್ರಗಳಿಂದಲೂ ದಾಳಿ

ಬೆಂಗಳೂರು: ಬೈಕ್ ಗೆ ಟಿಟಿ ವಾಹನ ಗುದ್ದಿಸಿ ಅಪಘಾತದಲ್ಲಿ ವ್ಯಕ್ತಿಯ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಜನವರಿ 7ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈಯದ್ ಯಾಸಿನ್ ಹಲ್ಲೆಗೊಳಗಾದ ವ್ಯಕ್ತಿ. ಚಿಕ್ಕಜಾಲ ಪೊಲೀಸ್ ಠಾಣೆಗೆ ಯಾಸಿನ್ ಅವರ ತಂದೆ ದೂರು ನೀಡಿದ್ದಾರೆ.

ಜನವರಿ 7ರಂದು ಯಾಸಿನ್ ತಮ್ಮ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ತೆರಳುವಾಗ ಉದ್ದೇಶಪೂರ್ವಕವಾಗಿ ಟೆಂಪೋ ಟ್ರಾವೆಲರ್ ವಾಹನವನ್ನು ಗುದ್ದಿಸಿ ಕೊಲೆಗೆ ಯತ್ನಿಸಲಾಗಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಯಾಸಿನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

ಯಾಸಿನ್ ಕಾಲಿನ ಮೂಳೆ ಮುರಿದಿದ್ದು. ಕುತ್ತಿಗೆ. ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ವೈದ್ಯಕೀಯ ವರದಿಯಲ್ಲೂ ಕೊಲೆ ಯತ್ನವಾಗಿದೆ ಎಂದು ದೃಢಪಟ್ಟಿದೆ. ಮೊದಲು ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಲಿದ್, ಫರಾನ್ ಖಾಲಿದ್, ಉಸ್ಮಾನ್, ಆಶಿಮ್, ಸೈಯದ್ ರಾಹಬೇರ್ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular