BIG NEWS : ಲಂಡನ್’ನಲ್ಲಿ ವಿದೇಶಾಂಗ ಸಚಿವ ‘ಜೈ ಶಂಕರ್’ ಮೇಲೆ ದಾಳಿಗೆ ಯತ್ನ : ವಿಡಿಯೋ ವೈರಲ್ |WATCH VIDEO

ಲಂಡನ್ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಮೇಲೆ ಖಲಿಸ್ತಾನಿ ಉಗ್ರಗಾಮಿಗಳು ದಾಳಿಗೆ ಯತ್ನಿಸಿದ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಗಳ ಅವರನ್ನು ರಕ್ಷಿಸಿದ್ದಾರೆ.

ಖಲಿಸ್ತಾನಿ ಉಗ್ರಗಾಮಿಯೊಬ್ಬ ಜೈಶಂಕರ್ ಅವರ ವಾಹನವನ್ನು ಸಮೀಪಿಸಿ ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆ ಭಾರತೀಯ ರಾಷ್ಟ್ರಧ್ವಜವನ್ನು ಹರಿದುಹಾಕುವ ವೀಡಿಯೊ ಕೂಡ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದೆ..
ಸಚಿವ ಜೈಶಂಕರ್ ಲಂಡನ್ ನಲ್ಲಿ ಚೆವನಿಂಗ್ ಹೌಸ್ ನಲ್ಲಿ ನಡೆದ ಕರ್ಯಕ್ರಮದಿಂದ ಹೊರಬರುತ್ತಿದ್ದರು. ಈ ವೇಳೆ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಲು ಯತ್ನಿಸಿದ್ದಾರೆ. ಪ್ರತಿಭಟನೆ ನೆಪದಲ್ಲಿ ಭದ್ರತೆ ಉಲ್ಲಂಘನೆ ಮಾಡಿ ಸಚಿವ ಜೈಶಂಕರ್ ಅವರ ಕಾರಿನ ಕಡೆಗೆ ನುಗ್ಗಿದ ಉಗ್ರನೊಬ್ಬ ದಾಳಿ ನಡೆಸಲು ಯತ್ನಿಸಿದ್ದಾನೆ. ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕಿದ್ದಾನೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವೇಳೆ ಪ್ರತಿಭಟನಾಕಾರ ಉಗ್ರರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read