HomeKarnatakaಅಪರಿಚಿತರ ನೆರವು ಪಡೆಯುವಾಗ ಹುಷಾರಾಗಿರಿ: ATM ಕಾರ್ಡ್ ಬದಲಿಸಿ ಮಹಿಳೆಗೆ 50 ಸಾವಿರ ರೂ. ವಂಚನೆ

ಅಪರಿಚಿತರ ನೆರವು ಪಡೆಯುವಾಗ ಹುಷಾರಾಗಿರಿ: ATM ಕಾರ್ಡ್ ಬದಲಿಸಿ ಮಹಿಳೆಗೆ 50 ಸಾವಿರ ರೂ. ವಂಚನೆ

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಎಟಿಎಂ ಕಾರ್ಡ್ ಬದಲಿಸಿ ಮಹಿಳೆಗೆ 50,000 ರೂ. ವಂಚಿಸಲಾಗಿದೆ.

ಪದ್ಮಾ ಹಣ ಕಳೆದುಕೊಂಡ ಮಹಿಳೆ. ಕರ್ನಾಟಕ ಬ್ಯಾಂಕ್ ಎಟಿಎಂಗೆ ಹಣ ಪಡೆಯಲು ಹೋಗಿದ್ದ ಅವರು ಅಲ್ಲೇ ಇದ್ದ ಅಪರಿಚಿತನ ನೆರವು ಕೇಳಿದ್ದಾರೆ. ಮೊದಲು ಬ್ಯಾಂಕ್ ಖಾತೆಯಲ್ಲಿರುವ ಮೊತ್ತವನ್ನು ಪರಿಶೀಲಿಸಿದ ವಂಚಕ ಪದ್ಮಾ ಖಾತೆಯಲ್ಲಿ ಹೆಚ್ಚಿನ ಹಣ ಇರುವುದನ್ನು ಗಮನಿಸಿದ್ದಾನೆ. ನಂತರ 10,000 ರೂ.ಗಳನ್ನು ಡ್ರಾ ಮಾಡಿಕೊಟ್ಟಿದ್ದಾನೆ.

ಎಟಿಎಂನಲ್ಲಿ ಹಣ ಖಾಲಿಯಾಗಿದೆ ಎಂದು ಪದ್ಮಾ ಅವರಿಗೆ ಹೇಳಿದ್ದಾನೆ. ನಂತರ ಮಹಿಳೆಯ ಎಟಿಎಂ ಕಾರ್ಡ್ ಬದಲಿಸಿ ಬೇರೆ ಕಾರ್ಡ್ ಕೊಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆ ಮನೆಗೆ ಬಂದ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಗೆ ಹಣ ವಿತ್ ಡ್ರಾ ಆಗಿರುವ ಮೆಸೇಜ್ ಬಂದಿದೆ. ತಮ್ಮ ಖಾತೆಯಿಂದ ಹಣ ಖಾಲಿಯಾಗುತ್ತಿರುವ ಮೆಸೇಜ್ ಬಂದಿದ್ದು, ತಕ್ಷಣ ಗಾಬರಿಯಾದ ಅವರು ಬ್ಯಾಂಕಿಗೆ ಹೋಗಿ ಪರಿಶೀಲಿಸಿದ್ದಾರೆ. ಅಷ್ಟರೊಳಗೆ 50,000 ಹಣ ಡ್ರಾ ಮಾಡಿಕೊಂಡು ದುರುಳ ಪರಾರಿಯಾಗಿದ್ದಾನೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular