ಭಾರೀ ಮಳೆಗೆ ಮುಳುಗಿದ ಚೆನ್ನೈ: 2015ರ ನಂತರ ಮಹಾ ಪ್ರವಾಹ: ಕನಿಷ್ಠ 7 ಮಂದಿ ಸಾವು: ನಾಳೆ ರಜೆ ಘೋಷಣೆ

ಚೆನ್ನೈ: ಮೈಚಾಂಗ್ ಚಂಡಮಾರುತದ ಅಬ್ಬರದಿಂದ ಸುರಿದ ಭಾರಿ ಮಳೆ ಪ್ರವಾಹಕ್ಕೆ ಚೆನ್ನೈ ತತ್ತರಿಸಿದೆ. ನಗರದಲ್ಲಿ 48 ಗಂಟೆಗಳಲ್ಲಿ ಸುಮಾರು 40 ಸೆಂ.ಮೀ ಮಳೆಯಾಗಿದೆ. 2015 ರ ಮಹಾನ್ ಚೆನ್ನೈ ಪ್ರವಾಹದ ನಂತರ ಇದು ಅತಿ ಹೆಚ್ಚಿನದಾಗಿದೆ.

ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹೆಚ್ಚಿನ ರಸ್ತೆಗಳು ಜಲಾವೃತಗೊಂಡವು. ಬಿರುಸಿನ ಗಾಳಿಯಿಂದ ಮರಗಳು ಉರುಳಿದವು. ಕಾರ್ ಗಳು ಮತ್ತು ಇತರ ವಾಹನಗಳು ಕೊಚ್ಚಿ ಹೋಗಿವೆ. ಬಿಡುವು ನೀಡದೆ ನೀರು ನುಗ್ಗಿದ್ದರಿಂದ ನಗರದ ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಅವಘಡದಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಚೆನ್ನೈ ಪೊಲೀಸರು ನಗರದಾದ್ಯಂತ ಐದು ಸಾವುಗಳ ಖಚಿತಪಡಿಸಿದ್ದಾರೆ.

ಡಿಸೆಂಬರ್ 5 ರಂದು ರಜೆ

ಡಿಸೆಂಬರ್ 5 ರಂದು ಸಹ ಸಾರ್ವಜನಿಕ ರಜೆ ಎಂದು ಸರ್ಕಾರ ಘೋಷಿಸಿದೆ. ಈ ಹಿಂದೆ ಡಿಸೆಂಬರ್ 4 ರಂದು ಸಾರ್ವಜನಿಕ ರಜೆ ಎಂದು ಘೋಷಿಸಿತ್ತು.

ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ.

ಭಾರೀ ಮಳೆ ಮತ್ತು ಅದರ ಪರಿಣಾಮದಿಂದಾಗಿ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಡಿಸೆಂಬರ್ 5 ಮಂಗಳವಾರದಂದು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ವಿನಂತಿಸಿದೆ.

ಚೆನ್ನೈ ವಿಮಾನ ನಿಲ್ದಾಣವನ್ನು ಡಿಸೆಂಬರ್ 5 ರಂದು ಬೆಳಿಗ್ಗೆ 9 ಗಂಟೆಯವರೆಗೆ ಮುಚ್ಚಲಾಗುವುದು,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read