HomeInternationalಮೆಕ್ಸಿಕೊದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಕಂದಕಕ್ಕೆ ಉರುಳಿ ಬಿದ್ದು 27 ಮಂದಿ ಸ್ಥಳದಲ್ಲೇ...

ಮೆಕ್ಸಿಕೊದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಕಂದಕಕ್ಕೆ ಉರುಳಿ ಬಿದ್ದು 27 ಮಂದಿ ಸ್ಥಳದಲ್ಲೇ ಸಾವು

ಮೆಕ್ಸಿಕೊ: ಮೆಕ್ಸಿಕೋದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ದಕ್ಷಿಣ ರಾಜ್ಯ ಓಕ್ಸಾಕಾದಲ್ಲಿ ಪ್ರಯಾಣಿಕರ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, 27 ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡ 17 ಜನರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಈ ಪ್ರದೇಶದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ” ಎಂದು ಓಕ್ಸಾಕಾ ರಾಜ್ಯ ಪ್ರಾಸಿಕ್ಯೂಟರ್ ಬರ್ನಾರ್ಡೊ ರೊಡ್ರಿಗಸ್ ಅಲಮಿಲ್ಲಾ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸ್ ಮಂಗಳವಾರ (ಜುಲೈ 4) ರಾತ್ರಿ ರಾಜಧಾನಿ ಮೆಕ್ಸಿಕೋ ನಗರದಿಂದ ಹೊರಟು ಸ್ಯಾಂಟಿಯಾಗೊ ಡಿ ಯೊಸುಂಡುವಾ ನಗರಕ್ಕೆ ತೆರಳುತ್ತಿತ್ತ ವೇಳೆ 40 ಅಡಿ ಕಂದಕ್ಕೆ ಉರುಳಿ ಬಿದ್ದಿದೆ. ಅಪಘಾತದ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ, ಆರಂಭಿಕ ಸೂಚನೆಗಳು ಯಾಂತ್ರಿಕ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು  ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular