ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ವಾರ್ತೆ

ಮೇಷ : ಕುಲದೇವತೆಯ ಅನುಗ್ರಹದಿಂದ ನಿಮಗೆ ಬಂದ ಸಂಕಷ್ಟಗಳು ದೂರಾಗಲಿದೆ. ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಮಾರ್ಗಸೂಚನೆಯಂತೆ ಮನೆಯ ಶುಭ ಕಾರ್ಯಗಳು ನೆರವೇರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನದಲ್ಲಿ ಯಶಸ್ಸು ಸಿಗಲಿದೆ.

ವೃಷಭ : ನಿಮ್ಮ ನಾಯಕತ್ವದ ಗುಣದ ಬಗ್ಗೆ ಪ್ರಶಂಸೆ ವ್ಯಕ್ತವಾಗಲಿದೆ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಾ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನ ಕಾಡಲಿದೆ. ಹೀಗಾಗಿ ಆದಷ್ಟು ವಿಶ್ರಾಂತಿ ಮಾಡಿ. ಕೃಷಿಕರಿಗೆ ಲಾಭ ಕಾದಿದೆ. ಸಂಗಾತಿಯಿಂದ ನೆಮ್ಮದಿ ಇದೆ.

ಮಿಥುನ : ಎಲ್ಲಾ ವಿಚಾರದಲ್ಲೂ ಪೋಷಕರ ಸಲಹೆಯನ್ನ ಕೇಳೋದನ್ನ ಮರೆಯಬೇಡಿ. ಕೋರ್ಟ್- ಆಸ್ತಿ ವಿಚಾರದಲ್ಲಿ ಜಯ ಸಿಗಲಿದೆ. ಆರ್ಥಿಕ ಜೀವನದ ಸುಧಾರಿಸಲಿದೆ. ದಾಂಪತ್ಯ ಜೀವನದಲ್ಲಿ ಕೊಂಚ ಕಿರಿಕಿರಿ ಉಂಟಾಗಬಹುದು.

ಕಟಕ : ನಿಮ್ಮ ಮುಂದಿರುವ ಎಲ್ಲಾ ಸಂಕಷ್ಟಗಳು ಶೀಘ್ರದಲ್ಲೇ ಮಂಜಿನಂತೆ ಕರಗಲಿದೆ. ಮನೆಯಲ್ಲಿ ಕಂಕಣ ಭಾಗ್ಯದ ಸುದ್ದಿ ಕೇಳಿಬರಲಿದೆ. ನಿಮ್ಮ ಪ್ರತಿಭೆಯಿಂದ ಕಚೇರಿಯಲ್ಲಿ ಎಲ್ಲರ ಮೆಚ್ಚುಗೆ ಪಡೆಯುತ್ತೀರಾ.

ಸಿಂಹ : ಅನಿರೀಕ್ಷಿತ ಮೂಲದಿಂದ ಹಣವು ಹರಿದು ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರ – ವ್ಯವಹಾರವು ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದರೂ ಸಹ ಕ್ರಮೇಣವಾಗಿ ಲಾಭ ಪಡೆಯುತ್ತೀರಾ. ಮನೆಯ ಪೀಠೋಪಕರಣ ಖರೀದಿಗಾಗಿ ಹಣ ವ್ಯಯವಾಗಲಿದೆ.

ಕನ್ಯಾ : ಮಕ್ಕಳ ಒತ್ತಾಯಕ್ಕೆ ಮಣಿದು ದುಬಾರಿ ಬೆಲೆಯ ವಸ್ತುವನ್ನ ಖರೀದಿ ಮಾಡಲಿದ್ದೀರಿ. ಆತ್ಮೀಯರನ್ನ ಭೇಟಿ ಮಾಡುವ ಅವಕಾಶ ಕೂಡಿ ಬರಲಿದೆ. ಸಹಾಯಕ್ಕೆಂದು ಬೇಡಿ ಬಂದವರಿಗೆ ನೆರವಾಗುವ ನಿಮ್ಮ ಬುದ್ಧಿ ಸಾರ್ವಜನಿಕ ವಲಯದಲ್ಲಿ ನಿಮ್ಮ ಗೌರವ ಹೆಚ್ಚಲು ಕಾರಣವಾಗಲಿದೆ.

ತುಲಾ : ಈ ಹಿಂದೆ ನಿಮ್ಮಿಂದ ಸಹಾಯ ಪಡೆದವರು ಇಂದು ನಿಮಗೆ ನೆರವಾಗಲಿದ್ದಾರೆ. ಆತ್ಮೀಯರ ನೋವಿನ ಕತೆ ಕೇಳಿ ನಿಮ್ಮ ಈ ದಿನವು ಕೊಂಚ ಬೇಸರದಿಂದಲೇ ಸಾಗಲಿದೆ. ಅಡಿಕೆ ವ್ಯಾಪಾರಸ್ಥರಿಗೆ ಇಂದು ಲಾಭ ಕಾದಿದೆ. ಆರ್ಥಿಕ ಲಾಭ ಸಿಗೋದರ ಜೊತೆಯಲ್ಲಿ ಖರ್ಚು ವೆಚ್ಚು ಸಹ ಏರಿಕೆಯಾಗಲಿದೆ.

ವೃಶ್ಚಿಕ : ಯಶಸ್ಸು ನಿಮ್ಮದಾಗಬೇಕು ಅಂದರೆ ಇದು ಕೈಯಲ್ಲಿರುವ ಹಣ ಖಾಲಿಯಾಗೋದು ಅನಿವಾರ್ಯವಾಗಲಿದೆ. ಸಂಗಾತಿಯೊಂದಿಗಿನ ವಾದದಲ್ಲಿ ನಿಮಗೆ ಸೋಲು ನಿಶ್ಚಿತ. ಕಚೇರಿಯಲ್ಲಿ ನಿಮ್ಮ ಪರವಾಗಿ ಪರಿಸ್ಥಿತಿಗಳು ಎದುರಾಗಲಿದೆ.

ಧನು : ವ್ಯವಹಾರದಲ್ಲಿ ಹಿಂದೆ ಮುಂದೆ ಯೋಚನೆ ಮಾಡದೇ ಹೂಡಿಕೆ ಮಾಡಿದ ಪರಿಣಾಮವಾಗಿ ನಷ್ಟ ಅನುಭವಿಸುತ್ತೀರಾ. ಹೀಗಾಗಿ ಮನೆಯಲ್ಲಿ ಆತಂಕ ಹೆಚ್ಚಾಗಲಿದೆ. ಸಂಗಾತಿ ನೀಡುವ ಸಲಹೆಯನ್ನ ಸೂಕ್ತವಾಗಿ ಕೇಳಿ ಆಗಿರುವ ನಷ್ಟ ಪರಿಹಾರಕ್ಕೆ ದಾರಿ ಕಾಣಲಿದೆ. ಮಕ್ಕಳಿಂದ ಶುಭ ವಾರ್ತೆ ಕೇಳುತ್ತೀರಾ.

ಮಕರ: ಈಗಾಗಲೇ ಮಾಡಿರುವ ಸಾಲ ಮೈಮೇಲೆ ಇರುವಾಗ ಮತ್ತೊಂದು ಕಡೆ ಸಾಲ ಮಾಡುವ ಹುಂಬ ಧೈರ್ಯ ಬೇಡವೇ ಬೇಡ. ಶನಿಯ ಕಾಟ ನಿಮ್ಮನ್ನ ಬಿಟ್ಟು ಬಿಡದೇ ಕಾಡುತ್ತಿದೆ. ಹೀಗಾಗಿ ಹೊಸ ಹೂಡಿಕೆಯ ಕಾರ್ಯಗಳು ಬೇಡವೇ ಬೇಡ.

ಕುಂಭ : ನೀವು ಎಷ್ಟೇ ಪ್ರಯತ್ನ ಪಟ್ಟರೂ ಸಹ ಹಣ ಉಳಿತಾಯ ಮಾಡೋದು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಬೇರೆಯವರ ಜೀವನದಂತೆ ಅನುಕೂಲವಿಲ್ಲ ಎಂಬ ಬೇಸರ ಬೇಡ. ಕ್ರಮೇಣವಾಗಿ ಎಲ್ಲವೂ ಒಳಿತಾಗಲಿದೆ.

ಮೀನ : ಭಗವಂತ ನಿಮಗೆ ನೀಡಿರುವ ವ್ಯಕ್ತಿತ್ವವೇ ನಿಮ್ಮನ್ನು ಕಾಪಾಡಲಿದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಿ. ಕುಲದೇವತೆಯನ್ನು ಆರಾಧನೆ ಮಾಡಿ. ಗುರುವಿನ ಕೃಪೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read