HomeIndiaBIG NEWS: ಕಾಂಗ್ರೆಸ್ ವಕ್ತಾರ ಪವನ್ ಖೇರಾ ದಂಪತಿಗಳ ವಿರುದ್ಧ ದೂರು ದಾಖಲಿಸಿದ ಅಸ್ಸಾಂ ಸಿಎಂ...

BIG NEWS: ಕಾಂಗ್ರೆಸ್ ವಕ್ತಾರ ಪವನ್ ಖೇರಾ ದಂಪತಿಗಳ ವಿರುದ್ಧ ದೂರು ದಾಖಲಿಸಿದ ಅಸ್ಸಾಂ ಸಿಎಂ ಪತ್ನಿ ರಿನಿಕಿ ಭುಯಾನ್ ಶರ್ಮಾ

ಗುವಾಹಟಿ: ತಮ್ಮ ವಿರುದ್ಧ ಮೂರು ಪಾಸ್ ಪೋರ್ಟ್, ವಿದೇಶದಲ್ಲಿ ವ್ಯವಹಾರ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕನ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ, ದೂರು ದಾಖಲಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ದಂಪತಿಗಳ ವಿರುದ್ಧ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ, ದೂರು ದಾಖಲಿಸಿದ್ದಾರೆ. ಗುವಾಹಟಿಯ ಪನ್‌ಬಜಾರ್ ಪೊಲೀಸ್ ಠಾಣೆಗೆ ಆಗಮಿಸಿ ರಿನಿಕಿ ಶರ್ಮಾ, ಖೇರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಮೂರು ಪಾಸ್​ಫೋರ್ಟ್​ ಹೊಂದಿದ್ದು, ವಿದೇಶದಲ್ಲಿ ವ್ಯವಹಾರ ಹೊಂದಿದ್ದಾರೆ ಎಂದು ಕಾಂಗ್ರೆಸ್​ ವಕ್ತಾರ ಪವನ್ ಖೇರಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಿನಿಕಿ ಭುಯಾನ್​ ಶರ್ಮಾ, ತಮ್ಮ ಪರ ವಕೀಲ ದೇವಜಿತ್ ಲೋನ್ ಸೈಕಿಯಾ ಜೊತೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಈ ಆರೋಪಗಳನ್ನು ಸಂಪೂರ್ಣವಾಗಿ ಸುಳ್ಳು ಎಂದಿರುವ ಅವರು, ತಪ್ಪಿತಸ್ಥರಿಗೆ ಶಿಕ್ಷೆಯಾಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮ ವಿರುದ್ಧ ಸಾಕ್ಷ್ಯಾಧಾರಗಳನ್ನು ಕೃತಕ ಬುದ್ಧಿಮತ್ತೆ ಮತ್ತು ಫೋಟೋಶಾಪ್ ಬಳಸಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಹಿಮಂತ, ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

ಕಾಂಗ್ರೆಸ್​ ತಪ್ಪು ಮಾಹಿತಿ ಹರಡುತ್ತಿದೆ. ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಗುಂಪಿನಿಂದ ಬಂದ ಸುಳ್ಳು ಮಾಹಿತಿಯನ್ನು ಬಳಸಿಕೊಂಡು ಕಾಂಗ್ರೆಸ್ ನನ್ನ ಪತ್ನಿಯ ವಿರುದ್ಧ ಆರೋಪ ಮಾಡುತ್ತಿದೆ ಎಂದಿದ್ದಾರೆ.

ನಿನ್ನೆ ಕಾಂಗ್ರೆಸ್​ ನಾಯಕರು ದೆಹಲಿ ಮತ್ತು ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದು, ಈ ಕುರಿತು ನಾವು ತನಿಖೆ ಮಾಡಿದಾಗ ಪಾಕಿಸ್ತಾನ ಸಾಮಾಜಿಕ ಜಾಲತಾಣದ ಗುಂಪಿನಿಂದ ಅವರಿಗೆ ಮಾಹಿತಿ ಪೂರೈಕೆಯಾಗಿದೆ ಎಂಬುದು ತಿಳಿದು ಬಂದಿದೆ ಎಂದು ಆರೋಪಿಸಿದ್ದಾರೆ. ಕಳೆದ 10 ದಿನಗಳಲ್ಲಿ, ಪಾಕಿಸ್ತಾನದ ಚಾನೆಲ್‌ಗಳು ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಕನಿಷ್ಠ 11 ಟಾಕ್ ಶೋಗಳನ್ನು ಮಾಡಿವೆ. ಪ್ರತಿ ಟಾಕ್ ಶೋನಲ್ಲಿ, ಕಾಂಗ್ರೆಸ್ ಗೆಲ್ಲಬೇಕು ನಿರ್ಣಯಿಸಲಾಗಿದೆ ಎಂದಿದ್ದಾರೆ.

ಪಾಸ್​ಪೋರ್ಟ್​ಗಳನ್ನು ಎಐ ಮೂಲಕ ಪೋಟೋಶಾಪ್​ ಮಾಡಿದ್ದಾರೆ. ಈಜಿಪ್ಟ್​ ಪಾಸ್​ಪೋರ್ಟ್​ ಕೂಡ ನಕಲಿಯಾಗಿದೆ. ಅವರ ದಾಖಲೆಗಳನ್ನು ಗೂಗಲ್​ ರಿವರ್ಸ್​ ಸರಳ ತಂತ್ರದ ಮೂಲಕ ನಕಲಿ ಎಂದು ಸಾಬೀತು ಮಾಡಬಹುದು ಎಂದರು.

ಚುನಾವಣಾ ಫಲಿತಾಂಶ ಅಥವಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಈ ರೀತಿ ನಕಲಿ ದಾಖಲೆ ಬಳಸಿ ಆರೋಪ ಮಾಡಲಾಗಿದೆ ಎಂದು ಸಿಎಂ ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular