
ಹುದ್ದೆಗಳಿಗೆ ಅನುಗುಣವಾಗಿ ಎಂಜಿನಿಯರಿಂಗ್, ಪದವಿ ಮತ್ತು ಪಿಜಿ ಪೂರ್ಣಗೊಳಿಸಿದವರು ಈ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. ಅರ್ಜಿಗಳನ್ನು ಆಗಸ್ಟ್ 28 ರೊಳಗೆ ಆನ್ ಲೈನ್ ನಲ್ಲಿ ಸಲ್ಲಿಸಬೇಕು. ಆಗಸ್ಟ್ 1, 2023ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 20 ರಿಂದ 30 ವರ್ಷಗಳ ನಡುವೆ ಇರಬೇಕು. ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ. ಇತರರಿಗೆ 850 ರೂ.
ಐಬಿಪಿಎಸ್ ಎಸ್ಒ 2023 ಹುದ್ದೆಗಳ ವಿವರ
ಅಗ್ರಿಕಲ್ಚರಲ್ ಫೀಡ್ ಆಫೀಸರ್-(ಸ್ಕೇಲ್-1): 500 ಹುದ್ದೆಗಳು
ಎಚ್ಆರ್/ಪರ್ಸನಲ್ ಆಫೀಸರ್-(ಸ್ಕೇಲ್-1): 31 ಹುದ್ದೆಗಳು
ಐಟಿ ಆಫೀಸರ್ (ಸ್ಕೇಲ್-1): 120 ಹುದ್ದೆಗಳು
ಲಾ ಆಫೀಸರ್ (ಸ್ಕೇಲ್-1): 10 ಹುದ್ದೆಗಳು
ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1): 700 ಹುದ್ದೆಗಳು
ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1): 41 ಹುದ್ದೆಗಳು
ಆನ್ಲೈನ್ ಪ್ರಿಲಿಮಿನರಿ ಪರೀಕ್ಷೆಯನ್ನು ಡಿಸೆಂಬರ್ 30 ಮತ್ತು 31 ರಂದು ನಡೆಸಲಾಗುವುದು. ಜನವರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮುಖ್ಯ ಪರೀಕ್ಷೆ ಜನವರಿ 28 ರಂದು ನಡೆಯಲಿದೆ. ಫೆಬ್ರವರಿ/ಮಾರ್ಚ್ ನಲ್ಲಿ ಸಂದರ್ಶನ ನಡೆಯಲಿದೆ.
ತಾತ್ಕಾಲಿಕ ಹಂಚಿಕೆಯ ದಿನಾಂಕವನ್ನು ಏಪ್ರಿಲ್ ನಲ್ಲಿ ಪ್ರಕಟಿಸಲಾಗುವುದು. ಬ್ಯಾಂಕ್ ಕೆಲಸಕ್ಕೆ ಸೇರುವ ಸಮಯದಲ್ಲಿ ಅಭ್ಯರ್ಥಿಗಳು ಸಿಬಿಲ್ ಸ್ಕೋರ್ 650 ಅನ್ನು ಕಾಪಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗಾಗಿ: https://www.ibps.in/ ಭೇಟಿ ನೀಡಬಹುದಾಗಿದೆ.

